ಮಂಗಳವಾರ, ಜನವರಿ 21, 2020
19 °C

ಕ್ರಿಕೆಟ್: ಮುಂಬೈ ತಂಡಕ್ಕೆ ಭರ್ಜರಿ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಸೈಯದ್ ಅಕ್ಬರ್ ಹುಸೈನಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಖಾಜಾ  ಎಜ್ಯುಕೇಶನ್ ಸೊಸೈಟಿ  ಹಾಗೂ ಖಾಜಾ ಬಂದೇನವಾಜ್ ಹೌಸ್ ಆಫ್ ಸ್ಪೋರ್ಟ್ಸ್ ಆಶ್ರಯದಲ್ಲಿ ಭಾನುವಾರ ನಡೆದ ರಾಷ್ಟ್ರ ಮಟ್ಟದ ಖಾಜಾ ಬಂದೇ ನವಾಜ್ ಗೋಲ್ಡ್ ಕಪ್ ಕ್ರಿಕೆಟ್ (16 ವರ್ಷ ವಯೋಮಿತಿ ಒಳಗಿನ ಬಾಲಕರ) ಟೂರ್ನಿಯಲ್ಲಿ  ಅಂಜುಮನ್ ಐ- ಇಸ್ಲಾಂ ಅಲನ್ ಸ್ಪೋರ್ಟ್ಸ್ ಮುಂಬೈ ತಂಡವು ಪ್ರೆಸಿಡೆಂಟ್11 ಕೆಬಿಎನ್ ಆಕಾಡೆಮಿ ಗುಲ್ಬರ್ಗ ತಂಡದ ವಿರುದ್ಧ 50 ರನ್‌ಗಳ ಅಂತರ ಭರ್ಜರಿ ಗೆಲುವು ಸಾಧಿಸಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 50 ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 232 ರನ್‌ಗಳನ್ನು ಪೇರಿಸಿತು.ಮಹೇಶ ಜಾಧವ್ ಬೌಲಿಂಗ್‌ನಲ್ಲಿ ಎರಡು ಬಾರಿ ಔಟ್ ಆಗದೆ ಜೀವದಾನ ಪಡೆದುಕೊಂಡ ಅದೀಬ್ ಉಸ್ಮಾನಿ 47 ರನ್ ಕಲೆ ಹಾಕುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಖಾನ್‌ಸೀಫ್ ಅಹ್ಮದ್ ಆರಂಭಿಕ ವಿಕೆಟ್ ಪತನವು ಮುಂಬೈ ತಂಡದಲ್ಲಿ ನಡುಕವನ್ನುಂಟು ಮಾಡಿತು. ನಂತರ ಕ್ರಿಸ್‌ಗೆ ಇಳಿದ ಅನ್ವರ್ ಅಲಿ 66 ಎಸೆತಗಳಲ್ಲಿ 56 ರನ್ ಕಲೆಹಾಕಿದರು. ಮಹೇಶ ಜಾಧವ್ ಬೌಲಿಂಗ್‌ನಲ್ಲಿ ಬೌಂಡರಿ ಎತ್ತಲು ಹೋಗಿ ಪ್ರತೀಕ್ ಬಂಢಾರಿಗೆ ಕ್ಯಾಚ್ ನೀಡುವ ಮೂಲಕ ವಿಕೆಟ್ ಒಪ್ಪಿಸಿದರು. ತಂಡದ ನಾಯಕ ಮಹ್ಮದ್ ಇಸಾಕ್, ಮಹ್ಮದ್ ಅನಿಸ್ ಚೌಧರಿ, ಕ್ರಮವಾಗಿ 22, 26 ರನ್‌ಗಳನ್ನು ಪೇರಿಸಿದರು. ಸ್ಪೀನ್ ಬೌಲಿಂಗ್‌ನಲ್ಲಿ ಲಯ ಕಂಡುಕೊಂಡ ಎದುರಾಳಿ ತಂಡದ ಬೌಲರ್ ಮಹೇಶ ಜಾಧವ 4 ವಿಕೆಟ್ ಪಡೆಯುವ ಮೂಲಕ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟುವಂತೆ ಮಾಡಿದರು.ನಂತರ ಬ್ಯಾಟಿಂಗ್ ಮಾಡಿದ ಕೆಬಿಎನ್ ತಂಡ 47.5 ಓವರ್‌ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 182 ರನ್ ಪಡೆಯಿತು. ಸೂರ್ಯ ಪ್ರತಾಭ್, ಖಾನ್ ಅಬ್ದುಲ್ ಮಸೀದ್, ಅದೀಬ್ ಉಸ್ಮಾನಿ ( ಕ್ರಮವಾಗಿ 3,2,2 ವಿಕೆಟ್ ಪಡೆದರು) ಸ್ಪಿನ್ ದಾಳಿಗೆ ಎದುರಾಳಿ ತಂಡದ ಬೌಲರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು.  ಚಂದ್ರಕಾಂತ ಹಾಗೂ ಅವಿನಾಶ ಕ್ರಿಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತಂಡದ ಗೆಲುವಿಗೆ ಆಸರೆಯಾಗಲಿಲ್ಲ. ಆರಂಭಿಕ ಓವರ್‌ಗಳಲ್ಲಿ ತನ್ನ ಬ್ಯಾಟಿಂಗ್ ಲಯ ಕಳೆದುಕೊಂಡ ಕೆಬಿಎನ್ ತಂಡವು  ಹೀನಾಯ ಸೋಲು ಅನುಭವಿಸಿತು.

ಅನ್ವರ ಅಲಿ ಪಂದ್ಯ ಪುರುಷ ಪ್ರಶಸ್ತಿ ಪಡೆದುಕೊಂಡರು.

 

ಪ್ರತಿಕ್ರಿಯಿಸಿ (+)