ಶನಿವಾರ, ಜನವರಿ 18, 2020
26 °C

ಅಂಗವಿಕಲರಿಗೂ ಶಾಸಕರ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಶಾಸಕರಿಗೆ ಪ್ರತಿವರ್ಷ ದೊರೆಯುವ ್ಙ 1 ಕೋಟಿ ಅನುದಾನದಲ್ಲಿ ್ಙ 10 ಲಕ್ಷವನ್ನು ಅಂಗವಿಕಲರ ಅಭಿವೃದ್ಧಿಗೆ ಬಳಸಲು ಸರ್ಕಾರ ಅವಕಾಶ ಕಲ್ಪಿಸಿದೆ ಎಂದು ಶಾಸಕ ಎಸ್.ಕೆ. ಬಸವರಾಜನ್ ತಿಳಿಸಿದರು.ಜಿಲ್ಲಾ ಪಂಚಾಯ್ತಿ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 14, 17 ವರ್ಷದ ವಯೋಮಿತಿಯ ಅಂಗವಿಕಲ ಬಾಲಕ- ಬಾಲಕಿಯರ ಕ್ರೀಡಾಕೂಟದಲ್ಲಿ ಅವರು ಈ ವಿಷಯ ತಿಳಿಸಿದರು.ಶಾಸಕರ ಅನುದಾನದಲ್ಲಿ ಶೇ. 10ರಷ್ಟು ಹಣವನ್ನು ಮೀಸಲಿಟ್ಟಿರುವುದರಿಂದ ಅಂಗವಿಕಲರಿಗೆ ಅನುಕೂಲವಾಗುತ್ತದೆ. ಅಂಗವಿಕಲರು ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂಗವಿಕಲರಿಗೆ ಮೋಟಾರ್‌ಸೈಕಲ್ ನೀಡಲು ಉದ್ದೇಶಿಸಿದ್ದೇನೆ ಎಂದು ತಿಳಿಸಿದರು.ಅಂಗವಿಕಲರು ಕೀಳರಿಮೆ ತೊರೆಯಬೇಕು. ಅಂಗವಿಕಲರು ಬುದ್ಧಿವಂತರು. ಸಾಮಾನ್ಯರಂತೆ ಬದುಕುವ ಛಲ ರೂಢಿಸಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ನಗರಸಭೆ ಉಪಾಧ್ಯಕ್ಷ ಅಲ್ಲಾಬಕ್ಷ, ಅಂಗವಿಕಲರು ಎದೆಗುಂದದೆ ಬದುಕು ಸಾಗಿಸಬೇಕು. ವಿಶಾಲ ಮನಸ್ಸಿನಿಂದ ಸಮಸ್ಯೆಗಳನ್ನು ಎದುರಿಸಬೇಕು ಎಂದರು.ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿ. ಬಸವರಾಜ್, ಶಿಕ್ಷಣಾಧಿಕಾರಿ ಎಸ್.ಕೆ.ಬಿ. ಪ್ರಸಾದ್, ದೈಹಿಕ ಪರಿವೀಕ್ಷಕ ಜಯಣ್ಣ ಹಾಜರಿದ್ದರು. ಶಿವರಾಂ ಕಾರ್ಯಕ್ರಮ ನಿರೂಪಿಸಿದರು. ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗೈರು ಹಾಜರಿ ಎದ್ದುಕಂಡಿತು.ಜಿಲ್ಲೆಯ ವಿವಿಧ ಶಾಲೆಗಳ 60 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ಒಟ್ಟು 5 ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)