ಭಾನುವಾರ, ಜನವರಿ 26, 2020
31 °C

ವಿದ್ಯೆಯ ಜೊತೆಗೆ ಸಂಸ್ಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕೃತಿ, ಸಂಸ್ಕಾರ ನೀಡುವುದು ಅಗತ್ಯ ಎಂದು ಖ್ಯಾತ ಹಿರಿಯ ಸಂಗೀತಗಾರ ಪಂಡಿತ ವಿನಾಯಕ ತೊರವಿ ಪ್ರತಿಪಾದಿಸಿದರು.ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ-2011-12 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯರು ಸಂಸ್ಕೃತಿಯನ್ನು ಕಲಿಯಲು ಬೇರೆ ಯಾರಿಂದಲೋ ಕಲಿಯಬೇಕಿಲ್ಲ. ಅದು ಅವರ ಮನೆಯಿಂದಲೇ ಪ್ರಾರಂಭವಾಗುತ್ತದೆ. ನಮ್ಮ ನಡೆ, ನುಡಿಗಳೆಲ್ಲವೂ ಸಂಸ್ಕೃತಿಯ ಭಾಗಗಳೇ ಆಗಿವೆ ಎಂದು ಅಭಿಪ್ರಾಯಪಟ್ಟರು.ಪಠ್ಯದ ಜೊತೆಗೆ ಕಲೆ, ಸಾಹಿತ್ಯ, ಸಂಗೀತದ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಅಂದಾಗ ಮಾತ್ರ ಶಿಕ್ಷಣಕ್ಕೆ ಸಾರ್ಥಕತೆ ಬರುತ್ತದೆ. ಯಾವುದು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಇಲ್ಲವೋ ಅದನ್ನು ಪಠ್ಯೇತರವಾಗಿ ನೀಡಬೇಕು ಎಂದು ತಿಳಿಸಿದರು.ಮಹಾನಗರ ಪಾಲಿಕೆ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ  ಆರತಿ ತಿವಾರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕರ್ನಾಟಕ ಸಂಗೀತ, ಭರತ ನಾಟ್ಯ ಮುಂತಾದ ಪ್ರದರ್ಶನ ಕಲೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಡಾ. ಮುರಳೀಧರ ಎಸ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಇಂದಿರಾ ಮಾನ್ವಿಕರ, ಪ್ರಭಾಕರ ಪಿ. ದೇಶಮುಖ, ಆರ್.ಎನ್. ರಾವ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಮಂಜುಳಾ ಕುಲಕರ್ಣಿ ಮತ್ತು ಭರತೇಶ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ದೇಸಾಯಿ ಸ್ವಾಗತಿಸಿದರು. ಕವಿತಾ ಶ್ರೀನಾಥ ಪರಿಚಯಿಸಿದರು. ಶಾಮರಾವ ಖಣಗೆ ವಂದಿಸಿದರು. ಸಂಸ್ಥೆಯ ಮಕ್ಕಳಿಂದ ಸಂಜೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರತಿಕ್ರಿಯಿಸಿ (+)