ಭಾನುವಾರ, ಜನವರಿ 19, 2020
27 °C

ಬುದ್ಧನ ಶಿಲೆಗಳ ಮಧ್ಯೆ ದೇಗುಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಡಿ: ಬುದ್ಧನ ಇತಿಹಾಸ ಹಾಗೂ ಅವನ ಧಮ್ಮ ಬಗ್ಗೆ ಸಾರುವ ಶಿಲಾ ಶಾಸನಗಳ ಮಧ್ಯೆ ದುರ್ಗಮ್ಮ ದೇವಿ ಮೂರ್ತಿ ಇಟ್ಟಿರುವುದನ್ನು ಬುದ್ಧ ಅಭಿಮಾನಿಗಳು ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಚಿತ್ತಾಪುರ ತಾಲ್ಲೂಕಿನ ಸನ್ನತಿ ಗ್ರಾಮದ ಸಮೀಪ ಇರುವ ಕನಗನಹಳ್ಳಿಯ ಜಮೀನೊಂದರಲ್ಲಿ ಈಚೆಗೆ ನಡೆಸಿದ ಸಂಶೋಧನೆ ವೇಳೆ ದೊರೆತ 3ನೇ ಶತಮಾನಕ್ಕೆ ಸೇರಿದ ಬೌದ್ಧ ವಿಹಾರ ಹಾಗೂ ಬುದ್ಧನ ಶಿಲಾಶಾಸನಗಳ ಅವಶೇಷಗಳ ಮಧ್ಯೆ ಏಕಾಏಕಿ ದುರ್ಗಮ್ಮ ದೇವಿ ಮೂರ್ತಿ ಸ್ಥಾಪಿಸಿ ಪೂಜೆ ಮಾಡುತ್ತಿರುವ ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕ್ರಮವನ್ನು ಸಂಘಟನೆ ಖಂಡಿಸುತ್ತದೆ ಎಂದು ಚಿತ್ತಾಪುರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೃಷ್ಣಪ್ಪ ಕರಣಿಕ ಹೇಳಿದ್ದಾರೆ.ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಾತತ್ವ ಇಲಾಖೆ ಹಾಗೂ ಸರ್ಕಾರ ಆ ಸ್ಥಳದಲ್ಲಿ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಕೆವಲ ಬುದ್ಧನ ಇತಿಹಾಸ ಸಾರುವ ಕುರುವು ಮಾತ್ರ ಪತ್ತೆಯಾಗಿದ್ದವು. ಮತ್ತು ಯಾವುದೇ ಮೂರ್ತಿ ಇರಲಿಲ್ಲ.

ಆದರೆ ಈಗ ಮೂರ್ತಿ ಸ್ಥಾಪನೆ ಮಾಡಿ ಮತ್ತೊಂದು ಇತಿಹಾಸ ಬರೆಯುವದಕ್ಕೆ ಕೆಲ ಕಿಡಿಗೆಡಿಗಳು ಹಾಗೂ ಧರ್ಮ ವಿರೋಧಿಗಳು ಮುಂದಾಗಿರುವ ಷಡ್ಯಂತ್ರವನ್ನು ಸಂಘಟನೆ ಖಂಡಿಸುತ್ತದೆ.6ಕೈ ಹೊಂದಿದ ಕರಿ ಕಲ್ಲಿನ ದುರ್ಗಮ್ಮ ದೇವಿ ಮೂರ್ತಿ ಇಡಲಾಗಿದೆ. ಇದು ಜಾತಿ ಸಂಘರ್ಷ ಮೂಡಿಸುವ ಸಲುವಾಗಿ ಮಾಡಿದ ಉದ್ದೇಶ ಪೂರ್ವಕ ಕೃತ್ಯವಾಗಿದೆ. ಎಂದು ಅವರು ಜಾತಿವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದರು.ಈಗಾಗಲೇ ಇದನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಪರಿಗಣಿಸಲಾಗಿದೆ.

 

ಆದ್ದರಿಂದ ದೇಶ ವಿದೇಶಗಳಿಂದ ಬುದ್ಧನ ಅನುಕರಣೆ ಮಾಡುವರು ಸನ್ನತಿಗೆ ಬರುತ್ತಿದ್ದಾರೆ. ಮತ್ತು ಬುದ್ಧನ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸುವಾಗಲೇ ಇಂಥದೊಂದು ವಿವಾದ ಸೃಷ್ಟಿಯಾಗಿರುವುದು ದಲಿತರನ್ನು ಕೆರಳಿಸಿದೆ.

ಆದ್ದರಿಂದ ದೇಶದಲ್ಲಿ ದಂಗೆ ಹೇಳುವ ಮುಂಚೆಯೇ ಸರ್ಕಾರ ಈ ವಿವಾದಕ್ಕೆ ಕಡಿವಾಣ ಹಾಕಬೇಕು. ಹಾಗೂ ಈ ವಿವಾದ ಹುಟ್ಟಿಸಿದ ಕಿಡಿಗೆಡಿಗಳನ್ನು ಬಂಧಿಸಬೇಕು. ಮತ್ತು ಮೂರ್ತಿಯನ್ನು ಶಿಘ್ರದಲ್ಲೇ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ಮುಂದೆ ಉರಿಯುವ ಜ್ವಾಲೆಗೆ ಸರ್ಕಾರವೇ ನೇರ ಹೋಣೆಯಾಗುತ್ತದೆ ಎಂದು ವಾಡಿ ಸಮಿತಿ ಸಂಚಾಲಕ ರವಿ.ಎಸ್.ಬಡಿಗೇರ, ಸಂಘಟನಾ ಸಂಚಾಲಕ ವಿಜಯಕುಮಾರ ಯಲಸತ್ತಿ, ವಿದ್ಯಾರ್ಥಿ ಒಕ್ಕೂಟದ ತಾಲ್ಲೂಕು ಸಂಚಾಲಕ ರಮೇಶ ಬಡಿಗೇರ, ಸದಸ್ಯರಾದ ಆನಂದ ಬಡಿಗೇರ, ಮನೋಹರ, ಸಂಜು ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)