ಶನಿವಾರ, ಮೇ 21, 2022
20 °C

ಜನಪರ, ಮಹಾನ್ ದೇಶಭಕ್ತ ಶಿವಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ಇಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ಶನಿವಾರ ಮರಾಠಾ ಸೇವಾ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ 381 ನೇ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದಿಂದ ಪ್ರಕಟಿಸಲಾದ ಶಿವಾಜಿಯವರ ಚಿತ್ರಪಟವನ್ನು ಬಿಡುಗಡೆ ಮಾಡಲಾಯಿತು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಲಾತೂರನ ಪ್ರೊ.ಎಂ.ಬಿ.ಪಠಾಣ ಮಾತನಾಡಿ ಶಿವಾಜಿ ಮಹಾರಾಜರು ಜನಪರ ಕಾರ್ಯಗಳನ್ನು ಮಾಡಿದ್ದರು. ರೈತರ ರಾಜ ಎನಿಸಿಕೊಂಡರು. ಮಹಾನ ದೇಶಭಕ್ತರಾಗಿದ್ದರು ಎಂದರು.ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಉದ್ಘಾಟಿಸಿ ಮಾತನಾಡಿದರು. ಮಾಜಿ ಶಾಸಕರಾದ ಎಂ.ಜಿ.ಮುಳೆ, ಮಲ್ಲಿಕಾರ್ಜುನ ಖೂಬಾ ಮಾತನಾಡಿದರು. ತಾಪಂ ಅಧ್ಯಕ್ಷ ಗುರುಲಿಂಗಪ್ಪ ಸೈದಾಪುರೆ, ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ತಾಪಂ ಮಾಜಿ ಅಧ್ಯಕ್ಷ ತುಕಾರಾಮ ಮೇತ್ರೆ, ಜಿಪಂ ಸದಸ್ಯರಾದ ರವೀಂದ್ರರೆಡ್ಡಿ ಪಾಟೀಲ, ಚಂದ್ರಶೇಖರ ಬಿರಾದಾರ, ಮುಖಂಡರಾದ ಅಂಗದರಾವ ಜಗತಾಪ, ಅರ್ಜುನ ಕನಕ, ದತ್ತಾ ಪರಶುರಾಮ, ವಾರೀಶ ಅಲಿ, ಎಸ್.ಎಂ.ಢೋಲೆ, ರಾಜೀವ ಪಾಟೀಲ ಹಳ್ಳಿ, ದತ್ತಾತ್ರಿ ಧುಳೆ, ಮಾಧವರಾವ ಹಸೂರೆ ಉಪಸ್ಥಿತರಿದ್ದರು.ಬಾಲಾಜಿ ಜಾಧವ ಅವರು ನಿರೂಪಿಸಿದರು. ದಿಲೀಪ ಸಾಗಾವೆ ಅವರು ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.