ಇಂಗಳಗಿ: ಪ್ರೌಢ ಶಾಲೆಗೆ ಬೀಗ

7

ಇಂಗಳಗಿ: ಪ್ರೌಢ ಶಾಲೆಗೆ ಬೀಗ

Published:
Updated:

ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಗಣಿತ ಶಿಕ್ಷಕರ ನೇಮಿಸಲು ಆಗ್ರಹಿಸಿ ಹಾಗೂ ಮುಖ್ಯಗುರುಗಳ ವರ್ತನೆ ಖಂಡಿಸಿ, ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಶುಕ್ರವಾರ ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾಕಾರರನ್ನು  ಉದ್ದೇಶಿಸಿ ಸಮಿತಿ ಗೌರವಧ್ಯಕ್ಷ ಬಸವರಾಜ ಅಳ್ಳೊಳಿ ಮಾತನಾಡಿ, ಒಂದು ವರ್ಷದಿಂದ ಶಾಲೆಯಲ್ಲಿ ಗಣಿತ ಶಿಕ್ಷಕರ ಕೊರತೆ ಇದೆ. ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.ಮುಖ್ಯಗುರು ನೇತ್ರಾವತಿ ಶಾಲೆಯನ್ನು ತಮ್ಮ ಮನಸ್ಸಿಗೆ ಬಂದಂತೆ ನಡೆಸುತ್ತಿದ್ದಾರೆ. ಬೇಕಾಬಿಟ್ಟಿ ಶಾಲೆಗೆ ಬರುತ್ತಾರೆ. ಪ್ರತಿ ಶನಿವಾರ 10.30 ಗಂಟೆವರೆಗೆ ಶಾಲೆ ನಡೆಸುತ್ತಾರೆ. ಕೇಳಿದರೆ ಅಧಿಕಾರಿಗಳಿಂದ ಅನುಮತಿ ಪಡೆದಿರುವುದಾಗಿ ಉತ್ತರ ನೀಡುತ್ತಾರೆ ಎಂದು ದೂರಿದರು.ಶಾಲೆಯಲ್ಲಿ ಯಾವುದೇ ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದ್ದರಿಂದ ಮಕ್ಕಳ ಬೌದ್ಧಿಕ ಮಟ್ಟ ಕುಸಿಯುತ್ತಿದೆ. ಶಾಲಾ ಪಲಿತಾಶಂವೂ ಕುಸಿಯುತ್ತಿದೆ ಎಂದರು.ಗಣಿತ ಶಿಕ್ಷರನ್ನು ನೇಮಿಸಬೇಕು. ಶಾಲಾ ಆಟದ ಮೈದಾನ ನಿರ್ಮಿಸಬೇಕು. ಕೇತ್ರಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಕ್ಲರ್ಕ್ ಅನ್ನು ಮರಳಿ ಶಾಲೆಗೆ ನಿಯೋಜಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸಮಿತಿ ಸದಸ್ಯರಾದ ಚಂದ್ರಕಾಂತ ಹೂಗಾರ,  ಡಾ.ಮೋಹನ  ಕುಮಾರ, ಕಾಶಿನಾಥ ಚನ್ನಗುಂಡ, ವೆಂಕಟಿ, ಜಬ್ಬರ್, ರವಿ ಅಳ್ಳೋಳಿ, ಸಿವುಕುಮಾರ ಎಚ್ಚರಿಸಿದರು.ಅಧಿಕಾರಿಗಳು ತಡವಾಗಿ ಬಂದಿದ್ದರಿಂದ 10ರಿಂದ 3 ಗಂಟೆವರೆಗೆ ಮಕ್ಕಳು ಬಿಸಿಲಲ್ಲೇ ಕುಳಿತುಕೊಳ್ಳಬೇಕಾಯಿತು. ಊಟ ಮಾಡುಂತೆ ಮಕ್ಕಳಿಗೆ ಪೊಲೀಸರು ಮನವೊಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮುಖ್ಯಗುರುಗಳ ವರ್ಗಾವಣೆ ಮಾಡುವರಿಗೆ ಊಟ ಮಾಡುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದರು. ವಾಡಿ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಪೆಕ್ಟರ್ ಶ್ರೀಮಂತ ಇಲ್ಲಾಳ್, ರುಕ್ಕಪ್ಪ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry