ದರ್ಶನ ನೀಡಿದ ಮಾತೆ ಮಾಣಿಕಮ್ಮ

7

ದರ್ಶನ ನೀಡಿದ ಮಾತೆ ಮಾಣಿಕಮ್ಮ

Published:
Updated:

ಸೇಡಂ: ನೂತನವಾಗಿ ರಚನೆಗೊಂಡ ಮಾತೆ ಮಾಣಿಕೇಶ್ವರ ವಿಶ್ವಸ್ಥ ಮಂಡಳಿ ನೋಂದಣಿ ಪತ್ರಗಳ ಪ್ರಕ್ರಿಯೆಗೆ ಭಾನುವಾರ ಸೇಡಂ ಮತ್ತು ಚಿತ್ತಾಪೂರ ನೋಂದಣಿ ಅಧಿಕಾರಿಗಳ ಸಮ್ಮುಖದಲ್ಲಿ ಕೆಳಗೆ ನೆರೆದಿದ್ದ ಸಹಸ್ರಾರು ಭಕ್ತರ ಜಯ ಘೋಷಗಳ ಮಧ್ಯೆ ಬೆರಳಿನ ಗುರುತು ಒತ್ತಿದರು.ಸೇಡಂ ತಾಲ್ಲೂಕಿನ ಯಾನಾಗುಂದಿ ಬೆಟ್ಟದಲ್ಲಿ ಇತ್ತೀಚಿನ ವರ್ಷಗಳಿಂದ ಭಕ್ತರಿಗೆ ಮಾತೆ ಮಾಣಿಕಮ್ಮ ಅವರ ದರ್ಶನ ನಿರಾಶೆಗಳ ಮಧ್ಯೆ ಭಾನುವಾರ ನೀಡಿದ ದರ್ಶನ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ, ಸಂತಸ ಮುಗಿಲು ಮುಟ್ಟಿತ್ತು. ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದ ವಿಶ್ವಸ್ಥ ಮಂಡಳಿ ರಚನೆಯಿಂದ ಅನೇಕ ಉಹಾ ಪೋಹಗಳಿಗೆ ತೆರೆ ಎಳೆದರು.

 

ವಿಶ್ವಸ್ಥ ಮಂಡಳಿ ಅಧ್ಯಕ್ಷವನ್ನು ಸ್ವತ: ಮಾತೆ ನಿರ್ವಹಿಸುವ ಜೊತೆಗೆ ಸದ್ಬಕ್ತರಿಗೆ ಕಾಲ ಕಾಲಕ್ಕೆ ದರ್ಶನ ನೀಡುವ ಭರವಸೆ ನೀಡಿದರು. ಶಿವಯ್ಯ ಸ್ವಾಮಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತೆ ಮತ್ತು ಉಳಿದ 9 ಜನರನ್ನು ಸದಸ್ಯರನ್ನಾಗಿ ನೇಮಿಸಿ ಉತ್ತಮ ಆಡಳಿತ ನಿರ್ವಹಿಸುವಂತೆ ಸೂಚಿಸಿದ್ದಾರೆ.ಜಯಕಾರ, ಘೋಷಣೆಗಳ ಮಧ್ಯೆ ಧನ್ಯರಾದ ಭಕ್ತರು ಅನೇಕರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ, ಸಚಿವ ರೇವುನಾಯಕ ಬೆಳಮಗಿ ಅಮ್ಮನ ದರ್ಶನ ಪಡೆದವರಲ್ಲಿ ಪ್ರಮುಖರು. ಈ ಸಂದರ್ಭದಲ್ಲಿ ಮಾತೆ ಧರ್ಮ ಜಾಗೃತಿ, ರಕ್ಷಣೆ ಮತ್ತು ಪ್ರಾಣಿಗಳ ಮೇಲೆ ದಯೆ ಇರಲಿ ಎಂದು ತಿಳಿಸಿದರು. ಬೆಳಿಗ್ಗೆ 11.10 ಗಂಟೆಗೆ ಗವಿಯಿಂದ ಹೊರ ಬಂದ ಮಾತೆ ನೋಂದಣಿ ಪ್ರಕ್ರಿಯೆ ಒಳಗೊಂಡಂತೆ ನೆರೆದಿದ್ದ ಸಹಸ್ರಾರು ಭಕ್ತರಿಗೆ ಒಂದು ಗಂಟೆಗಳ ಕಾಲ ಅವಧಿಗಿಂತಲೂ ಹೆಚ್ಚು ದರ್ಶನ ನೀಡಿದ್ದು ಈ ಸಲದ ವಿಶೇಷ ಎಂದು ವಕ್ತಾರ ಶರಣಪ್ಪ ಏಳ್ಳಿ ಸಿಂಧನಮಡು `ಪ್ರಜಾವಾಣಿ~ ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry