ಕಮಲಾಪುರ ಹೆದ್ದಾರಿ ಬಂದ್

7

ಕಮಲಾಪುರ ಹೆದ್ದಾರಿ ಬಂದ್

Published:
Updated:

ಕಮಲಾಪುರ: ಸಮೀಪದ ಬಾಚನಾಳ ಗ್ರಾಮದ ರಸ್ತೆ ಡಾಂಬರೀಕರಣ ಹಾಗೂ ಸರ್ಕಾರಿ ಬಸ್‌ಗಳ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಕಮಲಾಪುರ ಡಯಟ್ ಕಾಲೇಜು ಬಳಿ ಶ್ರೀರಂಗ ಪಟ್ಟಣ-ಬೀದರ್ ನಡುವಿನ ರಾಜ್ಯ ಹೆದ್ದಾರಿಯನ್ನು ಸೋಮವಾರ ಬಂದ್ ಮಾಡಿದರು.ಬಾಚನಾಳ ಗ್ರಾಮದ ಮೂಲ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಪರಿಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಬಳಿಕ ಉಪ ತಹಸೀಲ್ದಾರ ಸಂಗಮೇಶ ಜಿಡಗೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.ಗ್ರಾಮದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಮತ್ತೆ ರಸ್ತೆ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಸಚಿವರಿಗೂ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಿದರೂ ಉಪಯೋಗವಾಗಿಲ್ಲ. ಬಾಚನಾಳ ಗ್ರಾಮದಿಂದ ಕಮಲಾಪುರ ಕೇವಲ 5 ಕಿ.ಮೀ ದೂರದಲ್ಲಿದೆ. ಈ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ. 15 ವರ್ಷದಿಂದ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸೇರಿದಂತೆ  ಗ್ರಾಮದ ಜನರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.2009-10 ನೇ ಸಾಲಿನಲ್ಲಿ ಸುವರ್ಣ ಗ್ರಾಮವಾಗಿ ನೇಮಕವಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿ ಮೂರು ತಾಂಡಾಗಳಿದ್ದು ಅಲ್ಲಿ ಕುಡಿಯಲು ನೀರಿಲ್ಲ. ಸಮರ್ಪಕವಾದ ರಸ್ತೆಗಳಿಲ್ಲ. ಪ್ರತಿದಿನ ಪ್ರಯಾಣಿಸುವ ಶಾಲಾ ಮಕ್ಕಳ ಸ್ಥಿತಿಯು ಕೇಳುವವರು ಇಲ್ಲದಂತಾಗಿದೆ. ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ದೂರಿದರು.ಜಗದೀಶ ಮಾಲಿಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ ಎಂ. ಧನ್ನೂರ, ರಮೇಶ ಎಂ. ಜಮಾದಾರ, ಖುಬಾ ಡಿ. ಪವಾರ, ನಿವೃತ್ತ ಶಿರಸ್ತೆದಾರ ಸುಭಾಷ್‌ಚಂದ್ರ ಕಶೆಟ್ಟಿ, ಎನ್.ಬಿ. ಪ್ರಭುದ್ದಕರ್ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry