ಸ್ವಚ್ಛತೆಯಿಂದಲೇ ಆರೋಗ್ಯ: ಡಾ. ಶರ್ಮನ್

7

ಸ್ವಚ್ಛತೆಯಿಂದಲೇ ಆರೋಗ್ಯ: ಡಾ. ಶರ್ಮನ್

Published:
Updated:

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಜರ್ಮನ್ ನೆರವಿನ ಯೋಜನೆ ಅಡಿಯಲ್ಲಿ ನಿರ್ಮಿಸಿದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಹಾಗೂ ಆರೋಗ್ಯ ಸೌಲಭ್ಯಗಳನ್ನು ಜರ್ಮನ್ ದೇಶದ ಅಧಿಕಾರಿಗಳ ನಿಯೋಗ ಇಲ್ಲಿಗೆ ಭೇಟಿ ನೀಡಿ ಕಳೆದ ಸೋಮವಾರ ಪರಿಶೀಲಿಸಿತು.ಸಮುದಾಯ ಆರೋಗ್ಯ ಕೇಂದ್ರ ಕಟ್ಟಡದ ವಿನ್ಯಾಸಕಾರರಾದ ಕೆನಾಪ್, ಡಾ. ಎಚ್.ಕೆ ಶರ್ಮನ್, ಡೇವಿಡ್ ಶಹಾ ಸಿಮೆಕ್ ಹಾಗೂ ಕೆಎಚ್‌ಎಸ್‌ಆರ್‌ಡಿಪಿಯ ನಿರ್ದೇಶಕ ಡಾ. ಶ್ರೀಧರ, ಮುಖ್ಯ ಎಂಜಿನಿಯರ್ ಡಾ. ಗಣೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಅವರು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದರು.ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನ್ಯಾಸಕಾರ ಕೆನಾಪ್ ಕಟ್ಟಡ ಉತ್ತಮವಾಗಿ ನಿರ್ಮಿಸಲಾಗಿದೆ ಎಂದರಲ್ಲದೇ, ಯಂತ್ರೋಪಕರಣಗಳು ಬಳಸಿಕೊಳ್ಳಲು ಸಲಹೆ ಮಾಡಿದರು.ಡಾ. ಎಚ್.ಕೆ ಶರ್ಮನ್ ಮಾತನಾಡಿ ಸ್ವಚ್ಚತೆಯಿಂದಲೇ ಆರೋಗ್ಯ ಪಡೆಯಬಹುದಾಗಿದೆ. ಜರ್ಮನ್ ದೇಶದಲ್ಲಿನ ಸ್ವಚ್ಛತೆಯ ಕಲ್ಪನೆಗೂ ಇಲ್ಲಿನ ಜನರಲ್ಲಿನ ಸ್ವಚ್ಛತೆಯ ಕಲ್ಪನೆಗೂ ವ್ಯತ್ಯಾಸವಿದೆ. ಪ್ರತಿಯೊಬ್ಬರು ವೈಯಕ್ತಿಕ ಹಾಗೂ ಸಾಮುದಾಯಿಕ ಸ್ವಚ್ಛತೆ ಕಾಪಾಡಿದರೆ ಶೇ. 50 ರೋಗಗಳನ್ನು ಬಾರದಂತೆ ತಡೆಯಬಹುದಾಗಿದೆ ಎಂದರು.ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಅಶ್ಫಾಖ್ ಹುಸೇನ್, ಮುಖಂಡರಾದ ಚಂದ್ರಕಾಂತ ರಂಗನೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸುರೇಶ ಪಾಟೀಲ್, ರೇವಣಸಿದ್ದಯ್ಯ ಕಂಬದ್, ಸಿದ್ದು ಹಲಚೇರಾ, ಕಾರ್ಯಪಾಲಕ ಎಂಜಿನಿಯರ್ ವೀರಣ್ಣ ನಗನೂರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾಣಿಕರಾವ್ ಕನಕಟ್ಟೆ,  ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಎ.ಕೆ ಹಾಗೂ ಸಿಆಚ್‌ಸಿ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ, ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry