ಎಚ್‌ಕೆಇ ಸೊಸೈಟಿ ಚುನಾವಣೆಗೆ ತಡೆಯಾಜ್ಞೆ

7

ಎಚ್‌ಕೆಇ ಸೊಸೈಟಿ ಚುನಾವಣೆಗೆ ತಡೆಯಾಜ್ಞೆ

Published:
Updated:

ಗುಲ್ಬರ್ಗ: ಇಲ್ಲಿನ ಪ್ರತಿಷ್ಠಿತ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗೆ (ಎಚ್‌ಕೆಇಎಸ್) ಮಾರ್ಚ್ 18ರಂದು ನಡೆಯಲಿರುವ ಚುನಾವಣೆಗೆ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠದ ನ್ಯಾಯಮೂರ್ತಿ ಸತ್ಯನಾರಾಯಣ ಅವರು ಮಂಗಳವಾರ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು ಎಂದು ಆದೇಶ ನೀಡಿದ್ದಾರೆ.

 

ಸಂಸ್ಥೆಗೆ ಸದಸ್ಯತ್ವ ಬಯಸಿ ಅರ್ಜಿ ಸಲ್ಲಿಸಿದ 77 ಸಾವಿರ ಜನರಿಗೂ ಸದಸ್ಯತ್ವ ನೀಡಬೇಕೆಂದು ಹೈಕೋರ್ಟ್‌ಗೆ ಸಲ್ಲಿಸಿದ ವೆಂಕಾರೆಡ್ಡಿ ಮತ್ತಿತರರು (108 ಜನರು) ರಿಟ್ ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಪ್ರಕರಣವನ್ನು ಗುಲ್ಬರ್ಗ  ಹೈಕೋರ್ಟ್ ಸಂಚಾರಿ ಪೀಠಕ್ಕೆ ವರ್ಗಾಯಿಸಿತ್ತು. ಸಂಸ್ಥೆ ತನ್ನ ಸದಸ್ಯರ ಮಕ್ಕಳು, ಬಂಧುಗಳಿಗೆ ಸದಸ್ಯತ್ವ ಕೊಡಲು ಮುಂದಾಗಿರುವುದನ್ನು ಸಹ ರಿಟ್ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು ಎನ್ನಲಾಗಿದೆ.ಸೋಮವಾರ ನಡೆದ ವಿಚಾರಣೆಯಲ್ಲಿ ಸಂಸ್ಥೆಗೆ ಚುನಾವಣೆ ನಡೆಸದೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕೆಂದು ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮತ್ತೆ ಫೆ. 28ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.ಅರ್ಜಿದಾರರ ಪರ ಬೆಂಗಳೂರಿನ ರಾಜಶೇಖರ ಎಸ್., ಗುಲ್ಬರ್ಗದ ಪಿ. ವಿಲಾಸಕುಮಾರ, ಪ್ರಭಾಕರ ಪಾಟೀಲ, ನಿವಾ ಚಿಮಕೋಡ ವಾದಿಸಿದ್ದರು.ಚುನಾವಣೆಗೆ ತಡೆಯಾಜ್ಞೆ ಬಂದಿದೆ ಎಂದು ನಮ್ಮ ಪರ ವಾದಿಸುವ ವಕೀಲರು ನನಗೆ ತಿಳಿಸಿದ್ದು, ಇನ್ನೂ ತೀರ್ಪಿನ ಪ್ರತಿ ನನಗೆ ದೊರೆತಿಲ್ಲ ಎಂದು ಎಸ್ಕೆಇ ಸಂಸ್ಥೆಯ ಆಡಳಿತಾಧಿಕಾರಿ ಸಿ.ಆರ್. ಬಡಾ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry