ಬಗೀಚಾಸಿಂಗ್: 5ಲಕ್ಷ ಕಿ.ಮೀ. ಪಾದಯಾತ್ರೆ!

7

ಬಗೀಚಾಸಿಂಗ್: 5ಲಕ್ಷ ಕಿ.ಮೀ. ಪಾದಯಾತ್ರೆ!

Published:
Updated:

ಜೇವರ್ಗಿ: ದೇಶ ಸುತ್ತಿ ನೋಡು, ಕೋಶ ಓದಿ ತಿಳಿ ಎಂಬಂತೆ ಬಗಿಚಾಸಿಂಗ್ ಅವರು ಅಖಂಡ ಭಾರತವನ್ನು ಸುತ್ತಿದ್ದಾರೆ. 1993ರಲ್ಲಿ ಅಖಂಡ ಭಾರತ ದೇಶವನ್ನು ಪಾದಯಾತ್ರೆ ಮೂಲಕ ಚಾಲನೆ ನೀಡಿದರು. ಇದುವರೆಗೆ ಸುಮಾರು ಲಕ್ಷ 5,15000 ಕಿಲೊ ಮೀಟರ್ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ.

 

ಕಾಶ್ಮೀರದಿಂದ-ಕನ್ಯಾಕುಮಾರಿವರೆಗೆ ಇದುವರೆಗೆ 18 ಬಾರಿ ಪಾದಯಾತ್ರೆ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಬಗಿಚಾಸಿಂಗ್ ಅವರ ಯಾತ್ರೆಯ ಉದ್ದೇಶ ಇಡೀ ಭಾರತದಲ್ಲಿ ಗುಟಕಾ ನಿಷೇಧಿಸಬೇಕು. ಇಂದಿನ ಯುವಕರು ಗುಟಕಾ ಮತ್ತು ಧೂಮಪಾನದಿಂದ ಹಾಳಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ನಮ್ಮನ್ನಾಳುವ ಸರ್ಕಾರಗಳು ಗುಟಕಾ, ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಬೇಕು.  ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು. ಇಂದಿನ ಯಾಂತ್ರಿಕ ಹಾಗೂ ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೆ ತರಬೇಕು.ಭಾರತ ದೇಶದಲ್ಲಿ ಪ್ರತಿಶತ 70ರಷ್ಟು ಜನ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಸಮಯಕ್ಕೆ ಸರಿಯಾಗಿ ಮಳೆ, ಬೆಳೆಯಾಗಬೇಕಾದರೆ ಅರಣ್ಯ ಸಂಪತ್ತನ್ನು ಸಂರಕ್ಷಿಸಬೇಕು. ಕಾಡು ಇದ್ದರೆ ಮಳೆ ಬರುತ್ತದೆ.ಕಾಡು ಹಾಳಾದರೆ ನಾಡು ಹಾಳಾಗುತ್ತದೆ ಎಂದು ಹೇಳುವ ಬಗಿಚಾಸಿಂಗ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರಣ್ಯ ಸಂಪತ್ತನ್ನು ರಕ್ಷಿಸಲು ಮುಂದಾಗಬೇಕೆಂದು ಆಗ್ರಹಿಸಿದರು.ಹಿಂದಿ ಭಾಷೆಯಲ್ಲಿ ಮಾತನಾಡುವ ಬಗಿಚಾಸಿಂಗ್ ಅವರು ತಾವು ನಡೆಸುತ್ತಿರುವ ಪಾದಯಾತ್ರೆ ಉದ್ದೇಶಗಳನ್ನು ವಿವರಿಸಿದರು.ಶುಕ್ರವಾರ ಬೆಳಿಗ್ಗೆ 11.30ಗಂಟೆ ಸುಮಾರಿಗೆ ಗುಲ್ಬರ್ಗದಿಂದ-ಜೇವರ್ಗಿ ಕಡೆ ಬರುತ್ತಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ) ಬಣ ನಗರ ಶಾಖೆಯಿಂದ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಕರವೇ ನಗರ ಘಟಕದ ಅಧ್ಯಕ್ಷ ನಾಗರಾಜ ಆಲಗೂರ, ಕಾರ್ಯಾಧ್ಯಕ್ಷ ಈರಣ್ಣಗೌಡ ಗುಳ್ಯಾಳ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಪರಮೇಶ್ವರ ಬಿರಾಳ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಅಲಿ ದಖನಿ, ಉಪಾಧ್ಯಕ್ಷ ಪ್ರಭಾಕರ ಕಡಕೋಳಕರ್, ಶಂಕರಗೌಡ ಆಲೂರ, ಪ್ರಾಣೇಶ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರೆಂದು ಕರ್ನಾಟಕ ರಕ್ಷಣಾ ವೇದಿಕೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry