ಮಂಗಳವಾರ, ಜೂನ್ 22, 2021
27 °C

ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ: ಬೀದಿ ನಾಯಿಗೆ ಬಾಲಕಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಾಯಿ ಕಡಿದು ಗಾಯಗೊಂಡಿದ್ದ ಬಾಲಕಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಜನರು ಪ್ರತಿಭಟನೆ ನಡೆಸಿದರು.ನಗರದ ಮೊಮಿನ್‌ಪುರದ ಸುಮೈಯಾ ಎಂಟು ವರ್ಷದ ಬಾಲಕಿಗೆ ಫೆ. 3ರಂದು ನಾಯಿ ಕಚ್ಚಿತ್ತು. ತೀವ್ರ ಗಾಯಗೊಂಡಿದ್ದ ಆಕೆಯನ್ನು ನಗರದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು.

 

ನಂತರ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿಯು ಬುಧವಾರ ಮೃತಪಟ್ಟಿದ್ದಾಳೆ. ಆಕೆಯ ಶವವನ್ನು ನಗರಕ್ಕೆ ಗುರುವಾರ ತರಲಾಯಿತು.ಬಾಲಕಿಯ ದಾರುಣ ಸಾವು ಜನರಲ್ಲಿ ಆಕ್ರೋಶ ಮೂಡಿಸಿತು. ಗುಲ್ಬರ್ಗ ಮುಸ್ಲಿಮ್ ವೆಲ್ಫೇರ್ ಅಸೋಶಿಯೇಶನ್, ಜಿಲ್ಲಾ ಯುವ ಕಾಗ್ರೆಸ್ ಘಟಕ, ಜೆಡಿಎಸ್, ಇಂಡಿಯನ್ ಮುಸ್ಲಿಂ ಲೀಗ್ ಇನ್ನಿತರ ಸಂಘಟನೆಗಳು ನಾಗರಿಕರ ಜತೆಗೂಡಿ ಮುಸ್ಲಿಮ್ ಚೌಕ್‌ದಲ್ಲಿ ರಸ್ತಾ ರೋಕೋ ಹಾಗೂ ಧರಣಿ ನಡೆಸಿದವು. “ವಿವಿಧ ಬಡಾವಣೆಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಕ್ರಮ ಜರುಗಿಸಲು ಮಹಾನಗರ ಪಾಲಿಕೆಗೆ ಮನವಿ ನೀಡಿದ್ದೆವು.ಆದರೂ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅವರ ಈ ನಿರ್ಲಕ್ಷ್ಯದಿಂದ ಅಮಾಯಕ ಬಾಲಕಿ ಬಲಿಯಾಗುವ ಅಘಾತಕರ ಘಟನೆ ನಡೆದಿದೆ” ಎಂದು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸೈಯದ್ ಮಝರ್ ಹುಸೇನ್ ಆರೋಪಿಸಿದರು. ಮೃತಪಟ್ಟ ಬಾಲಕಿಯ ಪಾಲಕರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಹಾಗೂ ನಾಯಿ ಕಡಿತಕ್ಕೆ ಈಡಾಗಿ ಚಿಕಿತ್ಸೆ ಪಡೆಯುತ್ತಿರುವ ಬಡಾವಣೆಯ 24 ಜನರಿಗೆ ವೈದ್ಯಕೀಯ ಸೌಲಭ್ಯಕ್ಕೆ ಪರಿಹಾಕ ವಿತರಿಸಬೇಕು ಎಂದೂ ಅವರು ಆಗ್ರಹಿಸಿದರು.ಸದಸ್ಯ ಶಫೀಕ್ ಅಹಮದ್ ಹುಂಡೇಕಾರ್, ಮುಖಂಡರಾದ ಇಮ್ತಿಯಾಜ್ ಅಹಮದ್ ಸಿದ್ದಿಕಿ, ಅಬ್ದುಲ್ ರಹೀಮ್, ಮೊಹಮದ್ ಅಲಿಮುದ್ದೀನ್, ನಯೀಮ್ ಖಾನ್, ಖಾದಿರ್, ಅಝರ್ ಮುಬಾರಕ್, ರಬಿಯಾ ಶಿಕಾರಿ ಮೆಹ್ತಾ, ಸುರೈಯಾ ಬೇಗಂ, ಅಹಮದ್ ಬೇಗಂ, ರಾಧಾ ಗೌಳಿ ಇತರರು ಇದ್ದರು.ಮೇಯರ್, ಆಯುಕ್ತ ಭೇಟಿ: ಸ್ಥಳಕ್ಕೆ ಪಾಲಿಕೆ ಮೇಯರ್ ಅಶ್ಫಾಕ್ ಅಹಮದ್ ಚುಲ್‌ಬುಲ್ ಹಾಗೂ ಆಯುಕ್ತ ನಾಗಯ್ಯ ಧಾವಿಸಿ, ಧರಣಿನಿರತರ ಜತೆ ಮಾತುಕತೆ ನಡೆಸಿದರು. ನಾಗಯ್ಯ ಅವರು ತಕ್ಷಣದ ಪರಿಹಾರವಾಗಿ 10,000 ರೂಪಾಯಿ ಪರಿಹಾರವನ್ನು ಮೃತ ಬಾಲಕಿಯ ಪಾಲಕರಿಗೆ ನೀಡುವುದಾಗಿ ಪ್ರಕಟಿಸಿದರು. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿ ಶವದ ಮರಣೋತ್ತರ ಪರೀಕ್ಷೆ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.