ಗುರುವಾರ , ಜೂನ್ 17, 2021
22 °C

ರಾಜಕೀಯ ಪಕ್ಷ ನಂಬಬೇಡಿ:ದೊಡ್ಡಮನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಪಕ್ಷ ನಂಬಬೇಡಿ:ದೊಡ್ಡಮನಿ

ಗುಲ್ಬರ್ಗ: ಶಿಕ್ಷಣ ಪಡೆಯುವವರೆಗೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣ ಪಡೆಯುವ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಯಾವುದೇ ರಾಜಕೀಯ ಪಕ್ಷವನ್ನು ನಂಬಬೇಡಿ. ನಿಮ್ಮ ಕೆಲಸ ಮತ್ತು ಸಮಸ್ಯೆಗೆ ಯಾರು ಸ್ಪಂದಿಸುತ್ತಾರೆ ಎನ್ನುವುದು  ಮುಖ್ಯವಾಗಿದೆ ಎಂದು ಹಿರಿಯ ದಲಿತ ಮುಖಂಡ ಡಾ. ವಿಠಲ ದೊಡ್ಡಮನಿ ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ ಕರ್ನಾಟಕ ಸ್ಲಂ ಜನಾಂದೋಲನ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಲೆಮಾರಿ ಸಮುದಾಯಗಳ ನಾಯಕತ್ವ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ಯ ಸಿಕ್ಕಿ 60 ವರ್ಷ ಗತಿಸಿದರೂ ಈ ಜನರ ಸಮಸ್ಯೆ ಸಮಸ್ಯೆಯಾಗಿ ಉಳಿದಿದೆ. ಈ ಪ್ರದೇಶದಿಂದ ಹೋದಂತಹ ಪ್ರತಿನಿಧಿಗಳು ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿಲ್ಲ. ಅವರು ಕೋಟಿ ಕೋಟಿ ಹಣ ಲಪಟಾಯಿಸುತ್ತಿದ್ದಾರೆ. ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕು.

 

ನೀವು ಒಗ್ಗಟಿನಿಂದ ಏನಾದರೂ ಸಾಧಿಸಬಹುದು. ಒಗ್ಗಟಿನಿಂದ ಪ್ರತಿಭಟನೆ ಮಾಡಿ ನಾನು ನಿಮ್ಮ ಜೊತೆಗೂಡುವೆ ಎಂದು ತಿಳಿಸಿದರು.ಮಹಾನಗರ ಪಾಲಿಕೆಯ ನೂತನ ಮಹಾಪೌರ ಸೋಮಶೇಖರ ಮೇಲ್ಮನಿ ಮಾತನಾಡಿ, ಎಲ್ಲ ಕಡೆ ಹರಿದು ಹಂಚಿ ಹೊಗಿದ್ದ ಜನರನ್ನು ಒಂದೆಡೆ ಕೂಡಿಸಿದ ಈ ಸಮುದಾಯದ ಕಾರ್ಯ ಶ್ಲಾಘನೀಯ.

 

ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿ ಕೊಡುವ  ಪ್ರಯತ್ನ ಮಾಡುವೆ. ರಾಜ್ಯ ಸರ್ಕಾರದ ಜೊತೆ ಚರ್ಚಿಸಿ ಮಹಾನಗರ ಪಾಲಿಕೆಯ ಮೂಲಕ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡುವೆ ಎಂದು ಭರವಸೆಯ ಮಾತನ್ನು ನುಡಿದರು.ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕ ಅಲ್ಲಂ ಪ್ರಭು ನಿಂಬರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದ ರಾಜಾಪುರದಲ್ಲಿ 120 ಹಾಗೂ ಚಿಂಚೋಳಿ ಕ್ರಾಸ್ ಹತ್ತಿರ 120 ಕುಟುಂಬಗಳಿಗೆ ಮನೆ ಗುರುತಿಸಲಾಗಿದೆ. ಕುರುಬ, ಗೌಳಿ, ಸುಡುಗಾಡಸಿದ್ಧ ಇವರುಗಳು ಪರಿಶಿಷ್ಟ ಜಾತಿಗೆ ಒಳಪಡುವರು. ಇವರಿಗೆ  ಪಡಿತರ ಚೀಟಿ ಮತ್ತು ಮಕ್ಕಳಿಗೆ ಶಾಲೆಯ ಅನುಕೂಲತೆಯನ್ನು ಕೆಲ ಮಟ್ಟಗೆ ಹೊಂದಿದ್ದಾರೆ.

 

ನಗರದಲ್ಲಿ 9 ಕೊಳೆಗೇರಿ ಪ್ರದೇಶಗಳನ್ನು ಗುರುತಿಸಲಾಗಿದೆ. ಸ್ಲಂ ಜನಾಂದೋಲನದಿಂದ ಏಪ್ರಿಲ್ 14ರಂದು ಬಸವ ನಗರ, ಸಿದ್ಧಾರ್ಥನಗರ, ಸಿದ್ಧಾರೂಢ ಕಾಲೊನಿ, ತಾರ್‌ಪೈಲ್ ಬಡಾವಣೆ ಮುಂತಾದ ಕಡೆ ಟ್ಯೂಶನ್ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದರು.ಕೊಳೆಗೇರಿ ನಿವಾಸಿಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಬಾಬುರಾವ ದಂಡಿನಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಅಲೆಮಾರಿ, ಅರೆ ಅಲೆಮಾರಿ ಸಲಹಾ ಸಮಿತಿ ಸದಸ್ಯ ಸುಭಾಷ ಗೌಳಿ, ಜಿಲ್ಲಾ ಯುವ ಕಾಂಗ್ರೆಸ್ ತರಬೇತಿದಾರ ಲಿಂಗರಾಜ ಎಸ್. ಎಂ. ತಾರಫೈಲ್, ಅಲೆಮಾರಿ ಸಮುದಾಯ (ಬುಡಗ ಜಂಗಮ)ದ ಮರಲಿಂಗ ಕೋಮಾರಿ ಇದ್ದರು.ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನೂತನ ಮಹಾಪೌರ ಸೋಮಶೇಖರ ಮೆಲ್ಮನಿ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ವಿಠಲ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.ಯುವ ಮುಖಂಡ ನಾಗರಾಜ ವಾಡೇಕರ್ ನಿರೂಪಿಸಿ ಸ್ವಾಗತಿಸಿದರು. ಸ್ಲಂ ಜನಾಂದೋಲನದ ಸಹ ಕಾರ್ಯದರ್ಶಿ ಶ್ಯಾಮರಾಮ ಸಿಂಧೆ   ವಂದಿಸಿದರು. 54ನೇ  ಮಹೋತ್ಸವಗುಲ್ಬರ್ಗ: ಆಳಂದ ತಾಲ್ಲೂಕಿನ ಬಾಳಿಗ್ರಾಮದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಸಿದ್ಧರಾಮ ಶಿವಾಚಾರ್ಯ ನೇತೃತ್ವದಲ್ಲಿ ಮಾ. 22ರಿಂದ 24ರ ವರೆಗೆ ನಡೆಯಲಿದೆ ಎಂದು ಮಠದ ಭಕ್ತ ಗುರಲಿಂಗಯ್ಯ  ತಿಳಿಸಿದ್ದಾರೆ.

23ರಂದು ಬೆಳಿಗ್ಗೆ 8ಕ್ಕೆ ಪಲ್ಲಕ್ಕಿ ಮೆರವಣಿಗೆ ಸಂಜೆ 6ಕ್ಕೆ ರಥೋತ್ಸವ ನಡೆಯಲಿದೆ.

 24ರಂದು ಸಂಜೆ 5ಕ್ಕೆ ಜಂಗಿ ಪೈಲ್ವಾನರಿಂದ ಕುಸ್ತಿ ಪಂದ್ಯಗಳು ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.