ಭಾನುವಾರ, ಜೂನ್ 20, 2021
28 °C

ಉಪಮೇಯರ್‌ಸಯೀದಾಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ಮಹಾನಗರ ಪಾಲಿಕೆಯ ಕಾಂಗ್ರೆಸ್ ಪಕ್ಷದಿಂದ ಉಪಮಹಾಪೌರರಾಗಿ ಆಯ್ಕೆಯಾದ 11ನೇ ವಾರ್ಡ್‌ನ (ರೋಜಾ ಬಡಾವಣೆ) ಸಯೀದಾ ಬೇಗಂ ಸೋಮವಾರ ಅಧಿಕಾರ ಸ್ವೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಕಳೆದ 25 ವರ್ಷದಿಂದ ಪಾಲಿಕೆಯ ಸದಸ್ಯೆಯಾಗಿ ಆಯ್ಕೆಯಾಗುತ್ತಾ ಬಂದಿದ್ದೇನೆ.

 

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದರಿಂದ ಮತ್ತೊಮ್ಮೆ ಉಪಮಹಾಪೌರ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ~ ಎಂದರು.`ಈ ಹಿಂದೆ ಮಹಾಪೌರಳಾಗಿ ಕೆಲಸ ನಿರ್ವಹಿಸಿದ ಅನುಭವ ನನಗಿದೆ. ಬೀದಿನಾಯಿಗಳ ಹಾವಳಿ ಸೇರಿದಂತೆ ನಗರದಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು~ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದ ನಾಯಕರಾದ ಭೀಮರೆಡ್ಡಿ ಪಾಟೀಲ, ಅಬ್ದುಲ್ ರೆಹಮಾನ ಮುನ್ನಾ, ಫಯಾಜ್ ಅಲಿಖಾನ್, ಮಿರ್ಜಾ ಗಯಾಸ್ ಬೇಗ, ಸಲೀಂಭಾಯಿ, ಅಬ್ದುಲ್ ಖದೀರ್ ಚೊಂಗೆ, ಮಹ್ಮದ್ ಉಸ್ಮಾನ್, ಡಾ. ವಿಜಯ ಕಲ್ಮಣಕರ್, ಶಫೀಕ್ ಅಹ್ಮದ್, ಬಾಬಾ ಮೊಯಿನುದ್ದೀನ್, ರಫೀಕ್ ಅಹ್ಮದ್ ಅಬ್ಬು ಹಾಗೂ ಪಾಲಿಕೆಯ ಆಯುಕ್ತ ಡಾ. ಸಿ. ನಾಗಯ್ಯ ಹೂಗುಚ್ಚ ನೀಡಿ ನೂತನ ಮೇಯರ್ ಸಯೀದಾ ಬೇಗಂ ಅವರನ್ನು ಅಭಿನಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.