ಶುಕ್ರವಾರ, ಮೇ 27, 2022
28 °C

ಸಂಗೀತದಿಂದ ಒತ್ತಡ ನಿವಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂಗೀತದಿಂದ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡವನ್ನು ತಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಸಂಗೀತದ ಶಿಕ್ಷಣ ನೀಡಬೇಕು ಎಂದು ಮಹಾನಗರ ಪಾಲಿಕೆ ಸದಸ್ಯೆ ಆರತಿ ಸೂರಜ ಪ್ರಸಾದ ತಿವಾರಿ ತಿಳಿಸಿದರು. ಇಲ್ಲಿನ ನೂತನ ವಿದ್ಯಾಲಯದ ದತ್ತಾತ್ರೇಯ ಹೇರೂರ ರಂಗಮಂದಿರದಲ್ಲಿ ಶನಿವಾರ ಸಂಜೆ ಜರುಗಿದ ಹಂಸಧ್ವನಿ ತಬಲಾ ಕಲಾನಿಕೇತನದ 9ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅತ್ಯಂತ ನಿಷ್ಠೆ, ಶ್ರದ್ಧೆಯಿಂದ ಮಕ್ಕಳಲ್ಲಿನ ತಬಲಾ ಕಲೆಯನ್ನು ಸಮರ್ಥವಾಗಿ ಹೊರ ಹಾಕುವ ನಿಪುಣ ಕಲಾವಿದ ರವಿ ಕುಲ್ಕರ್ಣಿ ಅವರ ಉತ್ತಮ ತರಬೇತಿ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ. ಸತತ ಸಾಧನೆ, ನಿರಂತರ ಅಭ್ಯಾಸ ಬಲದಿಂದ ಸಂಗೀತ ಒಲಿಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ನೂತನ ವಿದ್ಯಾಲಯ ಸಂಸ್ಥೆಯ ಸದಸ್ಯ ಆರ್.ಎನ್. ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರಶೆಟ್ಟಿ ಮಾಲಿಪಾಟೀಲ, ಖ್ಯಾತ ತಬಲಾ ವಾದಕ ಜಯರಾವ ಕುಲ್ಕರ್ಣಿ ಅತಿಥಿಗಳಾಗಿದ್ದರು. ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.ಗಾಣಗಾಪುರ ದಂಡವತೆ ಆಶ್ರಮದ ಗೋವಿಂದ ಮಹಾರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಧೀಂದ್ರಾಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಂದಕುಮಾರ ಕುಲ್ಕರ್ಣಿ ಸ್ವಾಗತಿಸಿದರು. ಪ್ರತಿಭಾ ಈರಣ್ಣ ಕಂಬಾರ ಪ್ರಾರ್ಥಿಸಿದರು. ಕಲಾನಿಕೇತನದ ಅಧ್ಯಕ್ಷ ರವಿ ಕುಲ್ಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಹಂಸಧ್ವನಿ ತಬಲಾ ಕಲಾನಿಕೇತನದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.