ಗುರುವಾರ , ಮೇ 6, 2021
27 °C

ಮಹಿಪಾಲರೆಡ್ಡಿ ಮುನ್ನೂರ್‌ಗೆ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬದಲಾದ ಬೆಳವಣಿಗೆಯಿಂದಾಗಿ ತಾವು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿ.ಎಂ. ಮಣ್ಣೂರ ತಿಳಿಸಿದರು.ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಪರ್ಧೆಯಿಲ್ಲದೆ ಗೆಲ್ಲಬೇಕಾದ ಹಿರಿಯ ವ್ಯಕ್ತಿಗಳು ನೀವು, ನೀವು ಸ್ಪರ್ಧಿಸುವುದಾರೆ ಈಗ ಚುನಾವಣೆಗೆ ಸ್ಪರ್ಧಿಸಿರುವ ಮಹಿಪಾಲರೆಡ್ಡಿ ಅವರ ನಾಮಪತ್ರ ವಾಪಸ್ ತೆಗೆಸುವ ಜವಾಬ್ದಾರಿ ನಮ್ಮದು. ಇನ್ನೊಬ್ಬ ಅಭ್ಯರ್ಥಿ ವೀರಭದ್ರ ಸಿಂಪಿ ಅವರ ನಾಮಪತ್ರ ವಾಪಸ್ ತೆಗೆಸುವ ಜವಾಬ್ದಾರಿ ನಿಮ್ಮದು ಎಂದು ನನ್ನ ಹಿತೈಷಿಗಳು ಹೇಳಿದ್ದರು.

 

ಆದರೆ ಈ ವಿಷಯದಲ್ಲಿ ನಾನು ಸೋತಿರುವುದರಿಂದ ಅನಿವಾರ್ಯವಾಗಿ ಕೊನೆ ಕ್ಷಣದಲ್ಲಿ ನಾಮಪತ್ರವನ್ನು ವಾಪಸ್ ತೆಗದುಕೊಳ್ಳಲಾಗುವುದು ಎಂದು ಹೇಳಿದರು.ಸಿಂಪಿ ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿದ್ದಾರೆ. ರೆಡ್ಡಿ ಈಗಾಗಲೇ ಒಂದುಬಾರಿ ಸೋತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಾಗಿರುವುದರಿಂದ ಯುವಕ ಮಹಿಪಾಲರೆಡ್ಡಿ ಮುನ್ನೂರ್ ಅವರಿಗೆ ಭೇಷರತ್ತಾಗಿ ಬೆಂಬಲಿಸುವುದಾಗಿ ತಿಳಿಸಿದರು.ಕಾಲು ಬೀಳುವ ಸಂಸ್ಕೃತಿ ತೆಗೆದುಹಾಕುವ ಮೂಲಕ ಕೈ ಮುಗಿದು ಕನ್ನಡದ ಕೆಲಸ ಮಾಡುವ ಆ ಮೂಲಕ ಪರಿಷತ್‌ಗೆ ಗೌರವ ತಂದುಕೊಡುವ ರೆಡ್ಡಿಗೆ ಮತಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಉತ್ತಮ ವಾತಾವರಣ: ಚುನಾವಣೆ ನಿಮಿತ್ತ ಈಗಾಗಲೇ ಜಿಲ್ಲೆಯಾದ್ಯಂತ ಮೊದಲ ಸುತ್ತಿನ ಪ್ರಚಾರ ಮುಗಿದಿದ್ದು, ಕಳೆದ ಸಲದ ನನ್ನ ಸೋಲಿನ ಬಗ್ಗೆ ಜನರಿಗೆ ಅನುಕಂಪವಿದೆ. ಎಲ್ಲ ಕಡೆ ಉತ್ತಮ ವಾತಾವರಣ ನಿರ್ಮಾಣವಾಗಿದೆ.

 

ಹೀಗಾಗಿ ಗೆಲುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದರು. ಝರಣಪ್ಪ ಚಿಂಚೋಳಿ, ಲಕ್ಷ್ಮಣರಾವ ಗೋಗಿ, ಸುರೇಶ ಬಡಿಗೇರ, ಗುರುರಾಜ ಕುಲಕರ್ಣಿ, ಎಂ. ಬಸವರಾಜ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.ರೆಡ್ಡಿ ಸಿಂಪಿ ಮಧ್ಯೆ ನೇರ ಸ್ಪರ್ಧೆ

ಏ. 29ರಂದು ನಡೆಯಲಿರುವ ಕಸಾಪ ಚುನಾವಣೆಗಾಗಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಿ.ಎಂ. ಮಣ್ಣೂರ, ಎಸ್.ಕೆ. ಮಾವನೂರ, ಚಂದ್ರಶೇಖರ ಮೇಳಕುಂದಿ ಗುರುವಾರ ನಾಮಪತ್ರ ವಾಪಸ್ ತೆಗೆದುಕೊಂಡಿರುವುದರಿಂದ ಸಿಂಪಿ ಹಾಗೂ ಮುನ್ನೂರ್ ಮಧ್ಯೆ ನೇರ ಸ್ಪರ್ಧೆಯಿದೆ ಎಂದು ತಹಸೀಲ್ದಾರ್ ಮಹಾದೇವಪ್ಪ ಸಾಸನೂರ್ ತಿಳಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೇರ ಸ್ಪರ್ಧೆ ಏರ್ಪಟ್ಟಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.