ಶುಕ್ರವಾರ, ಮೇ 27, 2022
28 °C

ಜ್ಞಾನಾರ್ಜನೆಗಾಗಿ ಓದಿ: ಸತೀಶಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದದೇ ಜ್ಞಾನಾರ್ಜನೆಗೆ ಓದಿ ತಮ್ಮ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕೆಂದು ಚೆಟ್ಟಿನಾಡ್ ಸಿಮೆಂಟ್ ಕಾರ್ಪೊರೇಷನ್ (ಮಾನವ ಸಂಪನ್ಮೂಲ ವಿಭಾಗ)ನ ಪ್ರಧಾನ ವ್ಯವಸ್ಥಾಪಕ ಟಿ. ಸತೀಶಕುಮಾರ ತಿಳಿಸಿದರು.ಅವರು ಇಲ್ಲಿನ ವೀರೇಂದ್ರ ಪಾಟೀಲ್ ಪಬ್ಲಿಕ್ ಶಾಲೆ ಹಾಗೂ ಡಿಎಡ್ ಕಾಲೇಜಿನ 9ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಸೋಮವಾರ ಮಾತನಾಡಿದರು.ಮಗುವಿನ ಆಂತರಿಕ ಪ್ರಕ್ರಿಯೆಯಾದ ಕಲಿಕೆ ಯಶಸ್ವಿಯಾಗಲು ಶಿಕ್ಷಕರು, ಮಕ್ಕಳ ಆಸಕ್ತಿ ಕೆರಳಿಸಿ ಬೋಧಿಸಬೇಕು. ಆಧುನಿಕ ಬೋಧನಾ ವಿಧಾನ ಹಾಗೂ ಆನ್ ಲೈನ್ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.ಆಧುನಿಕ ತಂತ್ರಜ್ಞಾನ ಹಾಗೂ ಮೂಲ ಸೌಕರ್ಯಕ್ಕಾಗಿ ಚೆಟ್ಟಿನಾಡು ಸಮೂಹಕ್ಕೆ ಸೇರಿದ ದೇಶದ ಶೈಕ್ಷಣಿಕ ರಂಗದಲ್ಲಿ ಹೆಸರು ಮಾಡಿದ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಕೈಲಾಸ್ ವೀರೇಂದ್ರ ಪಾಟೀಲ್ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಕರೆ ತರಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು. ಮಕ್ಕಳ ಶೈಕ್ಷಣಿಕ ಚಟುವಟಿಕೆ ಗಮನದಲ್ಲಿರಿಸಿಕೊಂಡು ಮುಂದಿನ ವರ್ಷದಿಂದ ಡಿಸೆಂಬರ್‌ನಲ್ಲಿಯೇ ವಾರ್ಷಿಕೋತ್ಸವ ಆಚರಿಸಲು ಸಂಸ್ಥೆ ತೀರ್ಮಾನಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರದ ಆರೋಗ್ಯ ಇಲಾಖೆಯ ಡಾ. ಉಮೇಶ ಜಾಧವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಚಿತ್ರಶೇಖರ ಮೋತಕಪಳ್ಳಿ, ಬಿಇಒ ಅಮೃತರಾವ್ ಬಸಗುಂಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಬಾಷೀತ್ ಮಾತನಾಡಿದರು.ವೇದಿಕೆಯಲ್ಲಿ ಸಂಸ್ಥೆ ಉಪಾಧ್ಯಕ್ಷ ಬಸವರಾಜ ಮಲಿ, ಬಸವರಾಜ ಸಜ್ಜನಶೆಟ್ಟಿ, ಅಬ್ದುಲ್ ಖಾದರ್ ಜಿಲಾನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ್, ಆಡಳಿತಾಧಿಕಾರಿ ಶಾಂತಕುಮಾರ ಕುಲ್ಕರ್ಣಿ, ಡಿಎಡ್ ಕಾಲೇಜಿನ ಪ್ರಾಚಾರ್ಯ ಬಸವರಾಜ ಪಡಶೆಟ್ಟಿ ಮತ್ತಿತರರು ಇದ್ದರು.ಬಸವರಾಜ ಮಲಿ ಸ್ವಾಗತಿಸಿದರು. ಪ್ರಾಚಾರ್ಯ ಅಬ್ರಾಹಂ ನಿರೂಪಿಸಿದರು. ವಿಶ್ವನಾಥ ನಾಯನೂರು ವಂದಿಸಿದರು.     

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.