ಬುಧವಾರ, ಮೇ 12, 2021
25 °C

ಸೇವಾಲಾಲ್ ಭವನ ನಿರ್ಮಾಣಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ತಾಲ್ಲೂಕಿನ ಭೀಮನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ತಾಂಡಾದಲ್ಲಿ ಸೇವಾಲಾಲ್ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಿಯಾದ ರೂ,9.90 ಲಕ್ಷ, ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ರೂ,5 ಲಕ್ಷ ಒಟ್ಟು ರೂ. 14.90 ಲಕ್ಷ ಮೊತ್ತ ಅನುದಾನದ ಕಾಮಗಾರಿಗೆ ಶಾಸಕ ವಾಲ್ಮೀಕ ನಾಯಕ ಶನಿವಾರ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕ ವಾಲ್ಮೀಕ ನಾಯಕ, ತಾಲ್ಲೂಕಿನ 23 ತಾಂಡಾಗಳ ಜನರ ಅನುಕೂಲಕ್ಕಾಗಿ ಸೇವಾಲಾಲ್ ಸಮುದಾಯ ಭವನ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರ ಪ್ರತಿ ತಾಂಡಾಕ್ಕೆ ರೂ. 9.9 ಲಕ್ಷ ಅನುದಾನದಂತೆ ಒಟ್ಟು ರೂ. 2.27 ಕೋಟಿ ಅನುದಾನ ಮಂಜೂರಿ ಮಾಡಿದೆ. ತಾಂಡಾಗಳಲ್ಲಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೆ ಒಟ್ಟು ರೂ, 80 ಲಕ್ಷ ಅನುದಾನ ಮಂಜೂರಿ ಮಾಡಿದೆ ಎಂದು ತಿಳಿಸಿದರು.ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಎಮ್ಮೆನೋರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರಣಮ್ಮ ಪೂಜಾರಿ, ಮುಖಂಡರಾದ ಬಸವರಾಜ ತಿನಬೋ, ವಿಠಲ್ ರಾಠೋಡ್, ಸಿದ್ಧಣ್ಣ ಕಲ್ಲಶೆಟ್ಟಿ, ಹಣಮಂತರಾವ ಕುಲ್ಕರ್ಣಿ, ಕಾರ್ಯಾಲಯ ಕಾರ್ಯದರ್ಶಿ ವಿಷ್ಣು ಜಿತುರೆ, ಚಂದ್ರು ಕಾಳಗಿ, ಮೇಘನಾಥ ಚವ್ಹಾಣ್, ಹುಸನಪ್ಪ ಅಲ್ಲೂರ್, ನಿಂಗಾರೆಡ್ಡಿ, ಬಸವರಾಜ ಪೂಜಾರಿ, ರುದ್ರು ಸ್ವಾಮಿ, ಶರಣಪ್ಪ ಕಾಸಾ, ಸಿದ್ಧಣ್ಣಗೌಡ ಯಾಗಾಪುರ, ಟೋಪುಸಿಂಗ್, ವಕ್ತಾರ ಚಂದ್ರಶೇಖರ ಕಡೆಸೂರ, ರಾಚಣ್ಣ, ಭೂಸೇನಾ ನಿಗಮದ ಸಹಾಯಕ ಎಂಜಿನಿಯರ್‌ಗಳಾದ ಎಲ್.ಜೆ. ಪಾಟೀಲ್, ಜಾಫರ್ ಅಹ್ಮದ್ ಮುಂತಾದವರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.