ಮಂಗಳವಾರ, ಮೇ 18, 2021
24 °C

ಟ್ಯಾಂಕರ್ ನೀರ್ ಕೊಟ್ರ ಪುಣ್ಯ ಬರ್ತದ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: `ದೀಪದ ಬುಡದಲ್ಲಿ ಕತ್ತಲು~ ಎಂಬಂತೆ ಪುರಸಭೆ ನಿರ್ಲಕ್ಷ್ಯದಿಂದ ಪಟ್ಟಣದ ಮಾರ್ಕಂಡೆಯ ಓಣಿಯಲ್ಲಿರುವ ಅನೇಕ ಕುಟುಂಬಗಳು ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿವೆ.

ಪುರಸಭೆಯಿಂದ ಜೋಡಿಸಲಾದ ಪೈಪ್‌ಲೈನ್ ಕಾಮಗಾರಿಯಲ್ಲಿನ ಏರುಪೇರಿನಿಂದಾಗಿ ಇಲ್ಲಿರುವ 20ಕ್ಕಿಂತ ಹೆಚ್ಚು ಕುಟುಂಬಗಳಿಗೆ ನಿತ್ಯ ನೀರು ದೊರೆಯುತ್ತಿಲ್ಲ.  ಇಲ್ಲಿನ ಜನ ಕಳೆದ ನಾಲ್ಕು ವರ್ಷಗಳಿಂದ `ಬಾರದ ನೀರಿಗೆ ಸುಮ್ಮನೆ ಯಾಕೆ? ನೀರಿನ ಕರ ಕಟ್ಟಬೇಕು?~ ಎಂದು ಖಾಸಗಿ ನಳಗಳನ್ನು ತೆಗೆದು ಹಾಕಿದ್ದಾರೆ. ಇನ್ನು ಇಲ್ಲಿರುವ ಒಂದೇ ಒಂದು ಸಾರ್ವಜನಿಕ ನಲ್ಲಿಯಲ್ಲೂ ಸಮರ್ಪಕವಾಗಿ ನೀರು ಬರುವುದಿಲ್ಲ .ಈ ಕುಟುಂಬಗಳ ಗೋಳು ನಿವಾರಿಸಲು ಜನಪ್ರತಿನಿಧಿಗಳು ಪ್ರಯತ್ನಿಸಿಲ್ಲ. ಚುನಾವಣೆಗೆ ಒಮ್ಮೆ ಮಾತ್ರ ಈ ಓಣಿಯತ್ತ ಕಾಲಿಡುವ ನಾಯಕರು. ಸಮಸ್ಯೆ ಬಂದಾಗ ಸುಳಿಯುವುದಿಲ್ಲ ಎಂದು ನಾಗರಿಕರು ದೂರುತ್ತಾರೆ.

ಪಟ್ಟಣದ ಮಧ್ಯ ಭಾಗದಲ್ಲಿರುವ ಈ ಓಣೆಯ ಸಮೀಪದಲ್ಲಿ ಯಾವುದೇ ಕೊಳವೆ ಬಾವಿ ಇಲ್ಲ. ಇಲ್ಲಿರುವ ತೆರದ ಬಾವಿಯ ನೀರು ಕುಡಿಯಲು ಯೋಗ್ಯವಿಲ್ಲ.ಪಟ್ಟಣದ ಜಿಡ್ಡಿಮನೆ ಆಸ್ಪತ್ರೆಯಿಂದ ಪಾಟೀಲ ಆಸ್ಪತ್ರೆಯವರೆಗೆ ಕುಡಿಯುವ ನೀರಿನ ಸರಬರಾಜುವಿನಲ್ಲಿ ಸದಾ ವ್ಯತ್ಯಯು ಉಂಟಾಗುತ್ತಿದ್ದರೂ ಪುರಸಭೆಯ ಅಧಿಕಾರಿಗಳು ಇತ್ತ ಗಮನ ಹರಿಸುವುದಿಲ್ಲ. ಬೆಳಿಗ್ಗೆ ನೀರಿಗಾಗಿ ಬೇರೆ ಬೇರೆ ಓಣಿಗೆ ಅಲೆದಾಡುವುದು ಇವರ ದಿನದ ಕಾಯಕವಾಗಿದೆ.ಅಮರ್ಜಾ ನದಿಯಿಂದ ಸಾಕಷ್ಟೂ ನೀರು ಪೂರೈಕೆಯಾದರೂ ಈ ಜನರಿಗೆ ಅದರ ಭಾಗ್ಯವಿಲ್ಲದಾಗಿದೆ.  ಈ ಬೇಸಿಗೆಗೆ ಬಾವಿ ನೀರು ತಳಮಟ್ಟಕ್ಕೆ ತಲುಪಿರುವುದರಿಂದ ಆತಂಕಕ್ಕೊಳಗಾದ ಇವರು ಇತ್ತಿಚಿಗೆ ತಹಸೀಲ್ದಾರಿಗೆ ಮನವಿ ಸಲ್ಲಿಸಿದ್ದಾರೆ. ಶನಿವಾರದಿಂದ ಪುರಸಭೆ ಮೊದಲ ಬಾರಿಗೆ ಟ್ಯಾಂಕರ್ ಮೂಲಕ  ನೀರು ಪೂರೈಕೆ ಮಾಡುತ್ತಿದೆ.ಮಧ್ಯಾಹ್ನ ಬಿಸಿಲಿನಲ್ಲಿ ನೀರಿಗಾಗಿ ತಡಕಾಡುವುದು ಕಂಡುಬಂತು.ಬೇಸಿಗೆ ಮುಗಿಯುವರಿಗೆ ಪ್ರತಿದಿನ ಟ್ಯಾಂಕರ್ ಮೂಲಕ ನೀರು ಪೂರೈಕೆಮಾಡಿದರ ಪುರಸಭೆಗೆ ಪುಣ್ಯ ಬರ‌್ತದ್ರಿ~ ಎಂಬುದು ಹಿರಿಯ ನಾಗರಿಕ ಕಿಶನ ಜಾಧವ  ಅವರ ಹಾರೈಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.