ಮಸೀದಿಗಳ ಮೇಲಿನ ದಾಳಿ ಆರೋಪಿ ವಿರುದ್ಧ 89 ಪ್ರಕರಣ

ಶುಕ್ರವಾರ, ಏಪ್ರಿಲ್ 26, 2019
35 °C

ಮಸೀದಿಗಳ ಮೇಲಿನ ದಾಳಿ ಆರೋಪಿ ವಿರುದ್ಧ 89 ಪ್ರಕರಣ

Published:
Updated:

ವೆಲ್ಲಿಂಗ್ಟನ್‌: ಕ್ರೈಸ್ಟ್‌ಚರ್ಚ್‌ನ ಮಸೀದಿಗಳ ಮೇಲೆ ದಾಳಿ ನಡೆಸಿದ ಆರೋಪಿ ವಿರುದ್ಧ 50 ಕೊಲೆ ಪ‍್ರಕರಣ ಮತ್ತು ಕೊಲೆಗೆ ಯತ್ನಿಸಿದ 39 ಆರೋಪಗಳನ್ನು ಹೊರಿಸಲಾಗಿದೆ.

ಆರೋಪಿ ಆಸ್ಟ್ರೇಲಿಯಾದ ಬ್ರೆಂಟನ್‌ ಹ್ಯಾರ್ರಿಸನ್‌ ಟರ್ರಂಟ್‌ನನ್ನು (28) 2ನೇ ಬಾರಿ ನ್ಯಾಯಾಲಯದ ಮುಂದೆ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್‌ನ ಮಸೀದಿ ಮೇಲೆ ಗುಂಡಿನ ದಾಳಿ:49 ಸಾವು,ಬಾಂಗ್ಲಾ ಕ್ರಿಕೆಟ್ ತಂಡ ಪಾರು

ಮಾರ್ಚ್‌ 15ರಂದು ಮಸೀದಿಗಳ ಮೇಲೆ ನಡೆದ ದಾಳಿಯಲ್ಲಿ 50 ಮಂದಿ ಸಾವಿಗೀಡಾಗಿದ್ದರು ಮತ್ತು 50 ಮಂದಿ ಗಾಯಗೊಂಡಿದ್ದರು.ದಾಳಿ ಗಂಭೀರ ಸ್ವರೂಪದ್ದಾಗಿರುವುದರಿಂದ ಹೈಕೋರ್ಟ್‌ಗೆ ಪ್ರಕರಣವನ್ನು  ವರ್ಗಾಯಿಸಲಾಗಿದೆ. ಸದ್ಯ ಟರ್ರಂಟನನ್ನು ಭಾರೀ ಭದ್ರತೆ ಹೊಂದಿರುವ ಆಕ್ಲ್ಯಾಂಡ್‌ ಕಾರಾಗೃಹದಲ್ಲಿರಿಸಲಾಗಿದೆ.

ಇದನ್ನೂ ಓದಿ: ನ್ಯೂಜಿಲೆಂಡ್‌ ದಾಳಿ: ಕೋರ್ಟ್‌ನಲ್ಲಿ ಮಾಧ್ಯಮಗಳ ಕಡೆಗೆ ಹುಸಿ ನಗೆ ಬೀರಿದ ಹಂತಕ

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !