ಕುಡಿಯುವ ನೀರಿನ ಸಮಸ್ಯೆ: ಪರಿಹಾರ ಕ್ರಮ

7

ಕುಡಿಯುವ ನೀರಿನ ಸಮಸ್ಯೆ: ಪರಿಹಾರ ಕ್ರಮ

Published:
Updated:

ಗುಲ್ಬರ್ಗ: ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳಲ್ಲಿ ಆದ್ಯತೆ ಮೇರೆಗೆ ಪರಿಹಾರ ಕೆಲಸ ನಡೆಸಲಾಗಿದೆ. ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕೊಳವೆಬಾವಿ ರಿಪೇರಿ, ಹೊಸದಾಗಿ ಕೊಳವೆಬಾವಿ ಕೊರೆಸುವುದು ಸೇರಿದಂತೆ ಹಲವು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜಿ.ವಿಜಯಕುಮಾರ್ ತಿಳಿಸಿದ್ದಾರೆ.ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಬಗ್ಗೆ `ಪ್ರಜಾವಾಣಿ~ಯಲ್ಲಿ ಪ್ರಕಟಗೊಂಡ ವರದಿಯನ್ನು ಗಮನಿಸಿ, ತ್ವರಿತ ಕ್ರಮ ಜರುಗಿಸಲು ಆದೇಶಿಸಲಾಗಿತ್ತು. ಆ ಕುರಿತು ಕೈಗೊಂಡ ಪರಿಹಾರ ಕಾರ್ಯಗಳ ವಿವರಗಳನ್ನು ನೀಡಿದ್ದಾರೆ.ಬಬಲಾದ ಗ್ರಾಮದಲ್ಲಿ ಮೂರು ಬೋರ್‌ವೆಲ್ ಕೊರೆಸಿದ್ದು, ಆ ಪೈಕಿ ಎರಡು ವಿಫಲವಾಗಿ ಒಂದರಿಂದ ನೀರು ಸರಬರಾಜು ಆಗುತ್ತಿದೆ. ಇದರ ಜತೆಗೆ ಟ್ಯಾಂಕರ್ ಮೂಲಕವೂ ನೀರು ಪೂರೈಸಲಾಗುತ್ತಿದೆ. ಕಡಣಿಯಲ್ಲಿ ಬೋರ್‌ವೆಲ್ ದುರಸ್ತಿ, ಮಿಣಜಗಿ ತಾಂಡಾದಲ್ಲಿ ಬ್ೋವೆಲ್ ಫ್ಲಶಿಂಗ್ ಮಾಡಲಾಗಿದೆ.ಗೋಟೂರಿನಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಹೊಸ ಬೋರ್‌ವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ನೀರು ಪೂರೈಸಲಾಗುತ್ತಿದೆ. ಬಾವಿ, ಹಳ್ಳ ಬತ್ತಿರುವ ಕಡಗಂಚಿಯಲ್ಲಿ ನಾಲ್ಕು ಬೋರ್‌ವೆಲ್ ಕೊರೆಸಿದರೂ ಒಂದರಲ್ಲಿ ಮಾತ್ರ ನೀರು ಲಭ್ಯವಾಗಿದೆ. ಅದಕ್ಕೆ ಮೋಟರ್ ಹಾಗೂ ಅಲ್ಲಿಂದ ಸಾವಿರ ಅಡಿ ಉದ್ದದ ಕೊಳವೆಮಾರ್ಗ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. ಹೊದಲೂರಿನಲ್ಲಿ ಮೋಟರ್ ದುರಸ್ತಿ ಮಾಡಿಸಿ, ಅದಕ್ಕೆ ಹೆಚ್ಚುವರಿ ಪೈಪ್ ಹಾಕಲಾಗಿದೆ. ಹ್ಯಾಂಡ್‌ಪಂಪ್ ದುರಸ್ತಿ ಕೈಗೊಳ್ಳಲಾಗಿದೆ.ಖಜೂರಿ ಗ್ರಾಮಕ್ಕೆ 6 ಕಿ.ಮೀ. ದೂರದಲ್ಲಿನ ಸಾಲೆಗಾಂವ್ ಗ್ರಾಮದಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಆಗುತ್ತಿದೆ. ಇಲ್ಲಿ 20 ಎಚ್.ಪಿ. ಮೋಟರ್ ಅಳವಡಿಸಿ ಮೂರು ಗಂಟೆಯಲ್ಲಿ ಟ್ಯಾಂಕ್ ತುಂಬುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಪರಿಶಿಷ್ಟರ ಓಣಿಯಲ್ಲಿ ಒಂದು ಸಿಂಗಲ್ ಫೇಸ್ ಮೋಟರ್ ಅಳವಡಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry