ಕರ್ತವ್ಯ ಮರೆತ ಹೈಮಾಸ್ಟ್ ದೀಪ !

7

ಕರ್ತವ್ಯ ಮರೆತ ಹೈಮಾಸ್ಟ್ ದೀಪ !

Published:
Updated:
ಕರ್ತವ್ಯ ಮರೆತ ಹೈಮಾಸ್ಟ್ ದೀಪ !

ಕಮಲನಗರ:ಇಲ್ಲಿಗೆ ಸಮೀಪದ ಸಂಗಮ್ ಕ್ರಾಸ್ ಬಳಿ ಬಸವೇಶ್ವರ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ತನ್ನ ಕರ್ತವ್ಯವನ್ನು ಮರೆತು ಮಂಕಾಗಿ ನಿಂತಿದೆ.2009-10 ರಲ್ಲಿ ಎಂ.ಎಲ್.ಎ ಲ್ಯಾಡ್ (ಶಾಸಕರ ಪ್ರದೇಶಾಭಿವೃದ್ಧಿ ನಿಧಿ) ನಿಂದ ರೂ 1.60 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಉಪ ವಿಭಾಗ              ಔರಾದನಿಂದ ಹೈಮಾಸ್ಟ್ ದೀಪ ಅಳವಡಿಕೆಯ ಕಾಮಗಾರಿ ಕೈಗೊಳ್ಳಲಾಗಿತ್ತು. ಆರಂಭದ ಎರಡ್ಮೂರು ತಿಂಗಳು ಬೆಳಗಿದ ಈ ಹೈಮಾಸ್ಟ್ ದೀಪ, ನಂತರ ಕಾರ್ಯ ನಿರ್ವಹಿಸದೆ ಸ್ಥಗಿತಗೊಂಡಿವೆ. ಇದಕ್ಕೆ ಕಳಪೆ ಮಟ್ಟದ ಸರಕುಗಳನ್ನು ಬಳಸಿರುವುದೇ ಕಾರಣ ಎಂದು  ಗ್ರಾಮಸ್ಥರು    ತಿಳಿಸಿದ್ದಾರೆ.ಹೈಮಾಸ್ಟ್ ದೀಪ ಬೆಳಗುವುದನ್ನು ನಿಲ್ಲಿಸಿದ್ದರಿಂದ ಸಂಗಮ್ ಕ್ರಾಸ್‌ನಲ್ಲಿರುವ ಅನೇಕ ಅಂಗಡಿಗಳ ಕಳ್ಳತನವಾಗಿವೆ. ಪಕ್ಕದಲ್ಲಿರುವ ಹೊಲಗಳಿಂದ ನೀರೆತ್ತುವ ಮೋಟಾರ್, ಸ್ಪ್ರಿಂಕ್ಲರ್ ಪೈಪ್‌ಗಳ ಕಳ್ಳತನಗಳು ನಡೆಯುತ್ತಲೇ ಇವೆ. ಆದರೆ ಹೈಮಾಸ್ಟ್ ದೀಪ ದುರಸ್ತಿ ಕಾರ್ಯ ಮಾತ್ರ ನಡೆಯುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು.ರಾತ್ರಿ 8 ಗಂಟೆ ನಂತರ ಸಂಗಮ್ ಕ್ರಾಸ್‌ನಿಂದ ಬಳತ್, ತಪಶ್ಯಾಳ್ ಗ್ರಾಮಕ್ಕೆ ಹೋಗಲು ಬಸ್ ಸೌಕರ್ಯವಿಲ್ಲ. ಈ ಮಾರ್ಗವಾಗಿ ಪ್ರಯಾಣಿಸುವವರಿಗೆ ಕಾಲ್ನಡಿಗೆಯೆ ಅನಿವಾರ್ಯವಾಗಿದ್ದು, ಇವರಿಗೆ  ಹೈಮಾಸ್ಟ್ ದೀಪವೇ ದಾರಿದೀಪವಾಗಿದೆ.ನಾಂದೇಡ್-ಜಹೀರಾಬಾದ್ ಅಂತರ್‌ರಾಜ್ಯ ಹೆದ್ದಾರಿಯ ಮಧ್ಯೆದಲ್ಲಿ ಪ್ರತಿಷ್ಠಾಪಿಸಲಾದ ವಿಶ್ವಗುರು ಬಸವೇಶ್ವರರ ಪ್ರತಿಮೆಯ ಪಕ್ಕದಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಸ್ಥಗಿತಗೊಂಡ ಪ್ರಯುಕ್ತ ರಾತ್ರಿಯಲ್ಲಿ ಸಂಚರಿಸುವ ವಾಹನಗಳಿಗೆ ಇಲ್ಲಿರುವ ಪ್ರತಿಮೆ ಕಾಣದಾಗಿ, ಅನೇಕ ಸಲ ಡಿಕ್ಕಿ ಸಂಭವಿಸಿದ ಘಟನೆಗಳು ಜರುಗಿವೆ.ಹೀಗೇ ಕೆಲವೊಮ್ಮೆ ಅನಪೇಕ್ಷಿತ ಘಟನೆಗಳು ಸಂಭವಿಸುತ್ತಲೇ ಇದ್ದರೂ, ಹೈಮಾಸ್ಟ್ ದೀಪ ದುರಸ್ತಿಗೆ ಸಂಬಂಧಪಟ್ಟವರಾಗಲಿ, ಜನಪ್ರತಿನಿಧಿಗಳಾಗಲಿ ಕ್ರಮ ಕೈಗೊಳ್ಳುತ್ತಿಲ್ಲ.ಹೀಗೆ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮದ ಪ್ರಜ್ಞಾವಂತ ಯುವಕ ಅನಿಲಕುಮಾರ್ ಹೊಳಸಮುದ್ರೆ ಎಚ್ಚರಿಕೆ ನೀಡಿದ್ದಾರೆ.ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೋಟಿ ಕೋಟಿ ಅನುದಾನವನ್ನು ಹೊಳೆಯಂತೆ ಹರಿಸುತ್ತಿರುವ ಸರ್ಕಾರಕ್ಕೆ, ಸಂಗಮ್ ಕ್ರಾಸ್ ಬಳಿ ಅಳವಡಿಸಿರುವ ಹೈಮಾಸ್ಟ್ ದೀಪ ದುರಸ್ತಿ ಕಾರ್ಯ ಅಂಥ ದೊಡ್ಡದೇನಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಅಷ್ಟೇ.........ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry