ನಾಳೆ ಆಟೋ ಸ್ಟಿಕರ್ ವಿತರಣೆ

7

ನಾಳೆ ಆಟೋ ಸ್ಟಿಕರ್ ವಿತರಣೆ

Published:
Updated:

ಗುಲ್ಬರ್ಗ: ಮೂಲ ಪರವಾನಗಿ ಹೊಂದಿದ ಆಟೋಗಳಿಗೆ ಗುರುತಿನ ಚೀಟಿಯ ಮುದ್ರೆ (ಸ್ಟಿಕರ್) ವಿತರಿಸುವ ಕಾರ್ಯಕ್ರಮವು ಮೇ 22ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಪೊಲೀಸ್ ಪಥಸಂಚಲನ ಮೈದಾನದಲ್ಲಿ ನಡೆಯಲಿದೆ.

ಗುಲ್ಬರ್ಗ ನಗರದಲ್ಲಿ ಪರವಾನಗಿ ಇಲ್ಲದೇ ಸಂಚರಿಸುತ್ತಿರುವ ಆಟೋ ರಿಕ್ಷಾಗಳಿಗೆ ಕಡಿವಾಣ ಹಾಕಲು ಪರವಾನಗಿ ಪಡೆದ ಆಟೋಗಳ ಮಾಲೀಕರಿಗೆ ನಗರದ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ದಾಖಲೆ ಪ್ರಸ್ತುತ ಪಡಿಸಲು ಸೂಚಿಸಲಾಗಿತ್ತು. ಈಗಾಗಲೇ 4,000 ಆಟೋ ಮಾಲೀಕರು ತಮ್ಮ ದಾಖಲೆಗಳನ್ನು ಹಾಜರು ಪಡಿಸಿ ನೋಂದಾಯಿಸಿದ್ದಾರೆ.

ಈ ಪೈಕಿ ಸಂಚಾರಿ ಠಾಣೆಯಲ್ಲಿ ನೋಂದಾಯಿಸಿದ 1ರಿಂದ 100 ಮತ್ತು ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ನೋಂದಾಯಿಸಿದ 1001ರಿಂದ 1100 ಸಂಖ್ಯೆಯ ಆಟೋಗಳಿಗೆ ಸ್ಟಿಕರ್ ವಿತರಿಸಲಾಗುವುದು. ಉಳಿದ ಆಟೋಗಳಿಗೆ ಸಂಬಂಧಿತ ಠಾಣೆಯಲ್ಲಿ ಸ್ಟಿಕರ್ ನೀಡಲಾಗುವುದು. ಎರಡೂ ಠಾಣೆಗಳ ಒಟ್ಟು 200 ಆಟೋಗಳು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮಾಲೀಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಮಧುಕರ್ ಪವಾರ್ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry