ಕಮಲಾಪುರ: ವಿಫಲ ಯತ್ನ-ಸಿಕ್ಕಿ ಬಿದ್ದ ದರೋಡೆಕೋರ

7

ಕಮಲಾಪುರ: ವಿಫಲ ಯತ್ನ-ಸಿಕ್ಕಿ ಬಿದ್ದ ದರೋಡೆಕೋರ

Published:
Updated:

ಕಮಲಾಪುರ: ನಾಲ್ಕು ಮಂದಿಯ ತಂಡವೊಂದು ಗ್ರಾಮ ಪಂಚಾಯಿತಿ ಅಧ್ಯಕ್ಷನ ದರೋಡೆ ನಡೆಸಲು ಯತ್ನಿಸಿ, ಒಬ್ಬ ಸಿಕ್ಕಿ ಬಿದ್ದ ಘಟನೆ ಸೊಂತ ಸೇತುವೆ ಬಳಿಯಲ್ಲಿ ಶನಿವಾರ ಸಂಜೆ ನಡೆದಿದೆ.ಸೊಂತ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹ್ಮದ್ ಯೂಸುಫ್ ಗಪೂರ್‌ಸಾಬ್ ಶನಿವಾರ ಸಂಜೆ ಸೊಂತದಿಂದ ಕಮಲಾಪುರಕ್ಕೆ ಜೀಪಿನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಯೂಸುಫ್ ಅವರನ್ನು ಮಾರಕಾಸ್ತ್ರಗಳನ್ನು ತೋರಿಸಿ ತಡೆದು ನಿಲ್ಲಿಸಿದ ನಾಲ್ಕು ಮಂದಿಯ ತಂಡವು ಬಂಗಾರ, ಹಣ ಮತ್ತಿತರ ಸಾಮಗ್ರಿ ದರೋಡೆ ನಡೆಸಲು ಯತ್ನಿಸಿದೆ. ಈ ಸಂದರ್ಭ ಅಧ್ಯಕ್ಷ ಹಾಗೂ ದರೋಡೆಕೋರರ ನಡುವೆ ಹೊಯ್ ಕೈ ಉಂಟಾಗಿದೆ. ಆಗ ಆಕಸ್ಮಿಕವಾಗಿ ಈ ರಸ್ತೆಯಲ್ಲಿ ಬಂದ ಸೊಂತ ಗ್ರಾಮದ ವಿಠಲ ಮಾಸ್ತರ್ ಹಾಗೂ ಅರ್ಜುನ ಎಂಬವರನ್ನು ಕಂಡ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದಾರೆ.ತಕ್ಷಣ ಅಧ್ಯಕ್ಷ ಹಾಗೂ ಇನ್ನಿಬ್ಬರು ಕೂಡಿಕೊಂಡು ದರೋಡೆಕೋರರನ್ನು ಬೆನ್ನತ್ತಿದ್ದಾರೆ. ಆಗ ನಾಲ್ಕು ದರೋಡೆಕೋರರ ಪೈಕಿ ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಕೆ) ಮೂಲದ ಟಕ್ಲ್ಯಾ ಗಿರಿಗಿರಿ (45) ಎಂಬಾತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಕೇಂದ್ರ ಕಾರಾಗೃಹಕ್ಕೆ ಕಳುಹಿಸಿಕೊಡಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಪಿ.ಬಿ.ಶಾಂತಿನಾಥ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry