ನಾಮಫಲಕ ತೆರವು:ಆಗ್ರಹ

7

ನಾಮಫಲಕ ತೆರವು:ಆಗ್ರಹ

Published:
Updated:

ಗುಲ್ಬರ್ಗ: ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣಾ ಪ್ರಕ್ರಿಯೆ ಹಾಗೂ  ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರ ಹೆಸರು ಬರೆಸಲಾಗಿರುವ ನಾಮಫಲಕಗಳನ್ನು ಸಾರ್ವಜನಿಕ ಜಾಗದಿಂದ ತೆರವುಗೊಳಿಸಬೇಕು ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಕಾಶ ಬೆನಕನಳ್ಳಿ ಚುನಾವಣಾಧಿಕಾರಿಯಲ್ಲಿ ಆಗ್ರಹಿಸಿದ್ದಾರೆ.ನಗರದ ಬಸ್ ಡಿಪೋ ಹತ್ತಿರ, ಐಟಿಐ ಕಾಲೇಜು ಎದುರಗಡೆಯ ತಂಗುದಾಣದಲ್ಲಿ ಅಳವಡಿಸಲಾಗಿರುವ ಬಿಜೆಪಿ ಅಭ್ಯರ್ಥಿ ಅಮರನಾಥ ಎನ್. ಪಾಟೀಲ ಹೆಸರಿನ ನಾಮ ಫಲಕ  ತೆರವುಗೊಳಿಸಬೇಕು ಎಂದು ಚುನಾವಣಾ ಅಧಿಕಾರಿಗಳು ಹಾಗೂ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ. ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಲಾಗಿದೆ. ಎಚ್‌ಕೆಡಿಬಿ ವತಿಯಿಂದ ನಿರ್ಮಿಸಿದ ಬಸ್ ತಂಗುದಾಣಗಳಲ್ಲಿ ಅಳವಡಿಸಲಾಗಿರುವ ನಾಮ ಫಲಕ ಪದವೀಧರ ಮತದಾರರನ್ನು ಆಕರ್ಷಿಸಲಿದೆ ಎಂದು ಬೆನಕನಳ್ಳಿ ಹೇಳಿದ್ದಾರೆ.ಇದು ತೆಗೆದು ಹಾಕದಿದ್ದರೆ ಮತಗಳನ್ನು ಬಿಜೆಪಿ ಅಭ್ಯರ್ಥಿ ಪರ ಸೆಳೆದುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಚುನಾವಣೆ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry