ಪಠ್ಯಪುಸ್ತಕ ವಿತರಣೆ ಬಿರುಸು

7

ಪಠ್ಯಪುಸ್ತಕ ವಿತರಣೆ ಬಿರುಸು

Published:
Updated:
ಪಠ್ಯಪುಸ್ತಕ ವಿತರಣೆ ಬಿರುಸು

ಗುಲ್ಬರ್ಗ: ಪ್ರಸ್ತುತ ಶೈಕ್ಷಣಿಕ ವರ್ಷಕ್ಕಾಗಿ ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಪುಸ್ತಕಗಳನ್ನು ರವಾನಿಸುವ ಕೆಲಸ ಭರದಿಂದ ಸಾಗಿದೆ. ಕಳೆದ ವರ್ಷದಿಂದ ಜಾರಿಗೆ ಬಂದಿರುವ ನೀತಿಯ ಪ್ರಕಾರ, ತಾಲ್ಲೂಕು ಕೇಂದ್ರದಿಂದಲೇ ಪಠ್ಯಪುಸ್ತಕಗಳು ಶಾಲೆಗಳಿಗೆ ಪೂರೈಕೆಯಾಗುತ್ತಿವೆ.ಒಂದರಿಂದ 10ನೇ ತರಗತಿವರೆಗಿನ ಕನ್ನಡ, ಇಂಗ್ಲಿಷ್, ಉರ್ದು, ಹಿಂದಿ ಮಾಧ್ಯಮದ 384 ವಿಷಯಗಳ ಪಠ್ಯಪುಸ್ತಕಗಳು ಶಾಲೆಗಳಿಗೆ ಸರಬರಾಜು ಆಗುತ್ತಿವೆ. ಈ ಶೈಕ್ಷಣಿಕ ವರ್ಷದ ಶಾಲೆಗಳು ಬುಧವಾರ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಸೋಮವಾರದಿಂದಲೇ ಪುಸ್ತಕಗಳನ್ನು ಶಾಲೆಗಳಿಗೆ ರವಾನಿಸುವ ಕೆಲಸ ನಡೆಯುತ್ತಿದೆ.ಜಿಲ್ಲೆಯ ಎಲ್ಲ ತಾಲ್ಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಟ್ಟು 22,51,320 ಪುಸ್ತಕಗಳ ಬೇಡಿಕೆ ಇದೆ. ಈ ಪೈಕಿ 15,74,350 ಪುಸ್ತಕಗಳನ್ನು ಪೂರೈಸಲಾಗುತ್ತಿದೆ. ಕೊರತೆಯಿರುವ 6,76,970 ಪುಸ್ತಕಗಳು ಶೀಘ್ರವೇ ಸರಬರಾಜು ಆಗಲಿವೆ ಎಂದು ಮೂಲಗಳು ತಿಳಿಸಿವೆ.ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪೂರೈಸಲು 15,79,341 ಪುಸ್ತಕಗಳಿಗೆ ಬೇಡಿಕೆ ಬಂದಿದ್ದರೆ, 6,39,807 ಪುಸ್ತಕಗಳನ್ನು ಖಾಸಗಿ ಶಾಲೆಗಳು ಖರೀದಿಸಲಿವೆ. ದಾಸ್ತಾನು ಇರುವ ಪುಸ್ತಕಗಳ ಸಂಖ್ಯೆ 3,21,715.  ಈ ಪೈಕಿ ಸರ್ಕಾರಿ ಶಾಲೆಗಳಿಗೆ 11,51,328, ಖಾಸಗಿ ಶಾಲೆಗಳಿಗೆ 4,00,899 ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಉಚಿತವಾಗಿ ಪೂರೈಸಲು 4,28,013 ಹಾಗೂ ಖಾಸಗಿ ಶಾಲೆಗಳಿಗೆ 2,38,908 ಪುಸ್ತಕಗಳ ಕೊರತೆಯಿದೆ. ತಾಲ್ಲೂಕು ಕೇಂದ್ರಗಳಲ್ಲಿ ಪುಸ್ತಕ ವಿತರಣೆ ನಡೆಯುತ್ತಿದ್ದು, ಅನುದಾನರಹಿತ ಶಾಲೆಗಳ ಮುಖ್ಯಸ್ಥರು ಡಿಡಿ ಮೂಲಕ ಹಣ ಭರ್ತಿ ಮಾಡಿ, ಪುಸ್ತಕಗಳನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ.“ಈಗಾಗಲೇ ಶೇ. 70ರಷ್ಟು ಪುಸ್ತಕಗಳು ಬಂದಿವೆ. ಕಳೆದ ವರ್ಷ ನಮ್ಮಲ್ಲಿ ದಾಸ್ತಾನು ಇದ್ದ ಪುಸ್ತಕಗಳೂ ಸೇರಿದಂತೆ ಲಕ್ಷಾಂತರ ಪುಸ್ತಕ ವಿತರಣೆ ಭರದಿಂದ ನಡೆದಿದೆ. ಶೇ 10ರಷ್ಟು ಪುಸ್ತಕಗಳು ಕೊರತೆಯಾಗುವ ಸಾಧ್ಯತೆಯಿದ್ದು, ಅವೂ ಶೀಘ್ರವೇ ಬರಲಿವೆ” ಎಂದು ಡಿಡಿಪಿಐ ಬಿ.ಎಸ್.ಪರಮೇಶ ತಿಳಿಸಿದರು.ಚಿಂಚೋಳಿ ತಾಲ್ಲೂಕಿನಲ್ಲಿ 70 ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ ಮಾಡಲಾಗಿದೆ. ಆದರೆ 9 ಹಾಗೂ 10 ತರಗತಿಯ ಪಠ್ಯಪುಸ್ತಕ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದು ಹೇಳಲಾಗಿದೆ. ಆಳಂದ ತಾಲ್ಲೂಕಿನ ಶಾಲೆಗಳಿಗೆ ಪೂರೈಸಲು 2,80,505 ಪುಸ್ತಕಗಳ ಬೇಡಿಕೆ ಇದ್ದು, ಈ ಪೈಕಿ ಈವರೆಗೆ 2,08,640 ಸರಬರಾಜು ಮಾಡಲಾಗಿದೆ.ಇನ್ನೂ 71,865 ಪುಸ್ತಕಗಳು ಬರಬೇಕಾಗಿದೆ. ಜೇವರ್ಗಿ ತಾಲ್ಲೂಕಿನಲ್ಲಿ ಒಟ್ಟು 3,32,207 ಪಠ್ಯಪುಸ್ತಕ ಬೇಡಿಕೆಯಿದ್ದು, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ 1,87,336 ಪಠ್ಯಪುಸ್ತಕ ಉಚಿತವಾಗಿ ನೀಡಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 42,448 ಪಠ್ಯಪುಸ್ತಗಳು ಇಲಾಖೆಯಲ್ಲಿ ಉಳಿದಿದ್ದು, ಮೇ 20ರಿಂದಲೇ ತಾಲ್ಲೂಕಿನಲ್ಲಿರುವ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ವಿತರಿಸಲಾಗಿದೆ.ಸೇಡಂ ತಾಲ್ಲೂಕಿನಲ್ಲಿ 270 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದು, ಒಟ್ಟು 1,30,000 ಪಠ್ಯಪುಸ್ತಕ ಬೇಡಿಕೆ ಇದೆ. ಈಗಾಗಲೇ 79,000 ಪುಸ್ತಕ ಪೂರೈಕೆಯಾಗಿವೆ.“ಕಳೆದ ವರ್ಷ ನಮ್ಮಲ್ಲಿ 40,000 ಪುಸ್ತಕ ದಾಸ್ತಾನು ಇದ್ದು, ಕೊರತೆಯಿರುವ ಪುಸ್ತಕಗಳು ಒಂದೆರಡು ದಿನದೊಳಗೆ ಬರಲಿವೆ. ಈಗಾಗಲೇ ಶೇ 80ಕ್ಕೂ ಹೆಚ್ಚು ಪುಸ್ತಕಗಳು ನಮ್ಮಲ್ಲಿ ವಿತರಣೆಗೆ ಸಿದ್ಧ ಇವೆ” ಎಂದು ಬಿಇಒ ಚಂದ್ರಕಾಂತ ರೆಡ್ಡಿ ತಿಳಿಸಿದರು.ಅಫಜಲಪುರ ತಾಲ್ಲೂಕಿನಲ್ಲಿ ಒಟ್ಟು 175 ಸರ್ಕಾರಿ ಹಾಗೂ 3 ಅನುದಾನಿತ ಪ್ರಾಥಮಿಕ ಶಾಲೆಗಳು, 23 ಸರ್ಕಾರಿ ಪ್ರೌಢಶಾಲೆಗಳು, 8 ಅನುದಾನಿತ ಪ್ರೌಢಶಾಲೆಗಳಿವೆ.   2,01,675 ಬೇಡಿಕೆ ಪೈಕಿ, ಈಗಾಗಲೇ 1,60,276 ಬಂದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry