ಶುಕ್ರವಾರ, ಮೇ 27, 2022
28 °C

ಆಳ ಅಧ್ಯಯನ ಅವಶ್ಯ: ಬಸವರಾಜ ಸೇಡಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಂಶೋಧನೆಯ ಆಳಕ್ಕೆ ಇಳಿದು ಅಧ್ಯಯನ ನಡೆಸಿದಾಗ ನೈಜ ಸತ್ಯ ಜಗತ್ತಿಗೆ ಗೋಚರಿಸುತ್ತದೆ. ಈ ಸೃಷ್ಟಿಯ ಆಳದಲ್ಲಿ ಅನೇಕ ರಹಸ್ಯಗಳಿವೆ. ಅವುಗಳನ್ನು ಹೊರತರಲು ಮನುಷ್ಯ ಸತತ ಪ್ರಯತ್ನ ನಡೆಸುತ್ತಿದ್ದಾನೆ. ಅಂಥ ಪ್ರಯತ್ನದ ಮಾರ್ಗವೇ ಸಂಶೋಧನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪಾಟೀಲ ಬಸನಗೌಡ ಹುಣಸಗಿ ಅವರ `ಯಾದಗಿರಿ ಸಿರಿ~ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಂಶೋಧನೆ ಮಾಡುತ್ತಾ ಹೋದಂತೆ ಅನೇಕ ಮಹತ್ವದ ಮಾಹಿತಿ ದೊರೆಯುತ್ತವೆ. ಪರಂಪರೆಯನ್ನು ಮೆಲುಕು ಹಾಕುತ್ತಾ ಸತತ ಪರಿಶ್ರಮ, ಅಧ್ಯಯನದಿಂದ ಸಮಾಜಕ್ಕೆ ಮಾಹಿತಿ ಪೂರ್ಣ ಇತಿಹಾಸ ಗ್ರಂಥ ನೀಡುವಲ್ಲಿ ಚರಿತ್ರೆಕಾರರು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಪತ್ರಕರ್ತ ಎಸ್.ಆರ್.ಮಣ್ಣೂರ ಗ್ರಂಥ ಬಿಡುಗಡೆ ಮಾಡಿ ಮಾತನಾಡಿ, ಇತಿಹಾಸ ಸಂಶೋಧನೆಗೆ ಮೊದಲು ಆಸಕ್ತಿ, ಅಧ್ಯಯನ, ಕ್ಷೇತ್ರ ಕಾರ್ಯ ಮುಖ್ಯವಾಗುತ್ತದೆ. ಈ ಎಲ್ಲ ಮಜಲುಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಾಟೀಲ ಬಸನಗೌಡರು `ಯಾದಗಿರಿ ಸಿರಿ~ ಎಂಬ ಕೃತಿ ನೀಡಿರುವುದು ಶ್ಲಾಘನೀಯ. ಇತಿಹಾಸದ ಕುರುಹುಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಉಳಿಸುವುದು ಅವಶ್ಯ. ಇದ್ದಕ್ಕಾಗಿ ಸಂಶೋಧನೆ ಮಾರ್ಗ ಅವಶ್ಯವಾಗಿ ಬೇಕು ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಗ್ರಂಥ ಪರಿಚಯ ಮಾಡಿದರು.

ಹಿರಿಯ ಸಂಶೋಧಕ ಡಿ.ಎನ್.ಅಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಎಸ್. ದೇಸಾಯಿ, ಡಿ.ಎಚ್. ಕೇಸರಿ, ಪಾಟೀಲ ಬಸನಗೌಡ ಉಪಸ್ಥಿತರಿದ್ದರು.  ವಿಶ್ವನಾಥಯ್ಯ ಸ್ವಾಗತಿಸಿದರು. ಗುರುಲಿಂಗಯ್ಯ ನಿರೂಪಿಸಿದರು.

  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.