ಗುರುವಾರ , ಮೇ 19, 2022
20 °C

ವಿದ್ಯುತ್ ಸ್ಪರ್ಶಕ್ಕೆ ಎತ್ತು ಬಲಿ: ಅಮಾವಾಸ್ಯೆ ಗೌರವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಸ್ಥಳೀಯ ನಗರಸಭೆ ಉಪಾಧ್ಯಕ್ಷೆ ಗೀತಾ ಸಾಹೇಬಗೌಡ ಅವರ ಮನೆಯಲ್ಲಿನ ಎತ್ತೊಂದು ಮಂಗಳವಾರ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಕ್ಕೆ ಸಿಲುಕಿ ಮೃತವಾದ ಘಟನೆ ನಡೆದಿದೆ. ಇಲ್ಲಿನ ಹೊನಗುಂಟಿ ಕ್ರಾಸ್ ಬಳಿಯ ನೆಹರು ವೃತ್ತದಲ್ಲಿನ ವಿದ್ಯುತ್ ಕಂಬದ ತಂತಿ ತಗುಲಿದ ಪರಿಣಾಮ ಎತ್ತು ಸ್ಥಳದಲ್ಲೆ ಸತ್ತ ವರದಿಯಾಗಿದೆ.ಮಣ್ಣೆತ್ತಿನ ದಿನವೆ ತೀರಿದ ಎತ್ತಿಗೆ ನಂತರ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆದದ್ದು ವಿಶೇಷವಾಗಿತ್ತು. ಮೃತ ಎತ್ತನ್ನು ವಾಹನದಲ್ಲಿ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಇಲ್ಲಿನ ವೀರಶೈವ ರುದ್ರಭೂಮಿಯಲ್ಲಿ ಅಂತಿಮ ವಿಧಿ ನೆರವೇರಿಸಲಾಯಿತು. ತಾಲ್ಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ, ಸಾಹೇಬಗೌಡ ಬೋಗುಂಡಿ, ಎಸ್.ಎಸ್.ಧನಶೆಟ್ಟಿ, ಸೋಮಶೇಖರ ನಂದಿಧ್ವಜ, ಬಾಬುರಾವ ಬೋಗುಂಡಿ, ನಾಗಣ್ಣ ರಾಂಪುರೆ, ಶರಣು ಶೇರಿಕಾರ, ರಾಜು ಕೋಬಾಳ, ಬಸವರಾಜ ಕೊಲ್ಲೂರ, ಸೇರಿದಂತೆ ಮಹಿಳೆಯರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.