ಸೋಮವಾರ, ಮೇ 23, 2022
27 °C

ಕೋಡ್ಲಿ: ಸಂತ್ರಸ್ತ ಕುಟುಂಬಕ್ಕೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಅಮಾವಾಸ್ಯೆ ಬೆಳಿಗಿನ ಜಾವ ತಾಲ್ಲೂಕಿನ ಕೋಡ್ಲಿ ಗ್ರಾಮದ ಶಿವರಾಯ ಅಲ್ಲಾಪೂರ ಅವರ ಮನೆಗೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿ ಬದುಕು ಬೀದಿಗೆ ಬಿದ್ದ ಘಟನೆಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾ ಗಂಗಾರಾಮ ರಾಠೋಡ್ ಸದರಿ ಕುಟುಂಬ ವೈಯಕ್ತಿಕವಾಗಿ ನೆರವು ನೀಡಿದ್ದಾರೆ.ಮಂಡಲ ಪಂಚಾಯಿತಿಯ ಮಾಜಿ ಪ್ರಧಾನ ಹಾಗೂ ಬಿಜೆಪಿ ಹಿರಿಯ ಧುರೀಣ ರಾಮಲಿಂಗಾರೆಡ್ಡಿ ದೇಶಮುಖ್ ಅವರೊಂದಿಗೆ ಶಿವರಾಯ ಅಲ್ಲಾಪುರ ಬುಧವಾರ ತೆರಳಿದ ಅವರು, 50ಕೆ.ಜಿ. ಅಕ್ಕಿ, ಪತಿ ಹಾಗೂ ಪತ್ನಿಗೆ ಬಟ್ಟೆ ಮತ್ತು ಅಡುಗೆ ಮಾಡುವ ಸಾಮಾನುಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.ಮಂಗಳವಾರ ಬೆಳಿಗ್ಗೆ ಸಂಭವಿಸಿದ ದುರಂತದಲ್ಲಿ ನಗ ನಾಣ್ಯ, ಆಹಾರ ಧಾನ್ಯ ಹಾಗೂ ಬಟ್ಟೆ ಬರೆ ಸೇರಿದಂತೆ ಅಡುಗೆಯ ಎಲ್ಲಾ ಸಾಮಾನುಗಳು ಸುಟ್ಟಿರುವುದು ಕಂಡು ಮರುಗಿದ ರೇಣುಕಾ ಗಂಗಾರಾಮ ರಾಠೋಡ್, ಶಿವರಾಯ ಅಲ್ಲಾಪುರ ಕುಟುಂಬಕ್ಕೆ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ ದೇಶಮುಖ್, ಗ್ರಾಮ ಪಂಚಾಯಿತಿ ಸದಸ್ಯ ತುಳಜಪ್ಪ ಮಂತಟ್ಟಿ, ಶರಣಪ್ಪ ಕಾಳಗಿ, ಅಣ್ಣಪ್ಪ ಅರಳಿ, ನಾಗೇಂದ್ರಪ್ಪ ಬುಬಲಿ, ಅಣ್ಣರಾವ್ ಪೆದ್ದಿ, ಆನಂದ ಜಾಧವ್, ಅಭಿವೃದ್ಧಿ ಅಧಿಕಾರಿ ಬಂಡಪ್ಪ ಧನ್ನಿ ಮುಂತಾದವರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.