ಪುಲ್ವಾಮಾ ದಾಳಿ: ಪಾಕ್‌ ಕ್ರಿಕೆಟಿಗರ ಚಿತ್ರ ತೆಗೆದು ಕೆಎಸ್‌ಸಿಎ ಪ್ರತಿಭಟನೆ

ಶುಕ್ರವಾರ, ಮೇ 24, 2019
32 °C

ಪುಲ್ವಾಮಾ ದಾಳಿ: ಪಾಕ್‌ ಕ್ರಿಕೆಟಿಗರ ಚಿತ್ರ ತೆಗೆದು ಕೆಎಸ್‌ಸಿಎ ಪ್ರತಿಭಟನೆ

Published:
Updated:

ಬೆಂಗಳೂರು: ಕಾಶ್ಮೀರದ ಪುಲ್ವಾಮಾದಲ್ಲಿ ಸೇನೆಯ ಮೇಲೆ ನಡೆದ ಭಯೋತ್ಪಾದನೆ ದಾಳಿಯನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಪಾಕಿಸ್ತಾನ ಆಟಗಾರರ ಭಾವಚಿತ್ರಗಳನ್ನು ತೆರವುಗೊಳಿಸಿದೆ.

‘ಕ್ರೀಡಾಂಗಣದಲ್ಲಿದ್ದ ಇಮ್ರಾನ್ ಖಾನ್, ವಾಸೀಂ ಅಕ್ರಂ ಮತ್ತು ಇಂಜಮಾಮ್ ಉಲ್ ಹಕ್ ಸೇರಿದಂತೆ ಎಲ್ಲ ಪಾಕ್ ಆಟಗಾರರ ಚಿತ್ರಗಳನ್ನು ಎರಡು ದಿನಗಳ ಹಿಂದೆ ತೆರವುಗೊಳಿಸಿದ್ದೇವೆ. ದೇಶ ಮೊದಲು ಉಳಿದಿದ್ದು ನಂತರ’ ಎಂದು ಸಂಸ್ಥೆಯ ಹಂಗಾಮಿ ಕಾರ್ಯದರ್ಶಿ ಸುಧಾಕರ್ ರಾವ್ ಹೇಳಿದರು.  

‘ಕೆಎಸ್‌ಸಿಎ ಮಾತ್ರವಲ್ಲ. ದೇಶದ ಬೇರೆ ಬೇರೆ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಲ್ಲಿ ಇದೇ ರೀತಿಯ ಪ್ರತಿಭಟನೆಗಳು ವ್ಯಕ್ತವಾಗಿವೆ’ ಎಂದರು.

ಫೆಬ್ರುವರಿ 14ರಂದು ದಾಳಿಯಾದ ಎರಡು ದಿನಗಳ ನಂತರ ಮುಂಬೈನ ಕ್ರಿಕೆಟ್ ಕ್ಲಬ್‌ ಆಫ್‌ ಇಂಡಿಯಾ (ಸಿಸಿಐ) ತನ್ನ ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನದ ಈಗಿನ ಪ್ರಧಾನಿ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಭಾವಚಿತ್ರಕ್ಕೆ ಹೊದಿಕೆ ಹಾಕಿ ಮುಚ್ಚಿತ್ತು. ಅದರ ನಂತರ ಮೊಹಾಲಿ, ರಾಜಸ್ಥಾನ ಮತ್ತಿತರ ಕಡೆಗಳಲ್ಲಿ ಪಾಕ್ ಕ್ರಿಕೆಟ್‌ ಆಟಗಾರರ ಚಿತ್ರಗಳನ್ನು ತೆರವುಗೊಳಿಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !