ವಕೀಲರ ಸಂಘ ರಾಜಕೀಯ ಪಕ್ಷದ ಆಶ್ರಯದಲ್ಲಿ ಇಲ್ಲ: ಎ.ಪಿ.ರಂಗನಾಥ್

7

ವಕೀಲರ ಸಂಘ ರಾಜಕೀಯ ಪಕ್ಷದ ಆಶ್ರಯದಲ್ಲಿ ಇಲ್ಲ: ಎ.ಪಿ.ರಂಗನಾಥ್

Published:
Updated:

ಬೆಂಗಳೂರು: ‘ಬೆಂಗಳೂರು ವಕೀಲರ ಸಂಘ ರಾಜಕೀಯ ಪಕ್ಷದ ಆಶ್ರಯದಲ್ಲಿ ಇಲ್ಲ’ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ ವೆಬ್‌ ಆವೃತ್ತಿಯಲ್ಲಿ ಸೆ.30ರಂದು ಪ್ರಕಟವಾಗಿರುವ, ‘ವಕೀಲರ ಸಂಘದಲ್ಲಿ ರಾಜಕೀಯ ನೆರಳು’ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, ಸಂಘವು ತನ್ನದೇ ಆದ ಸ್ವಚ್ಛ, ಸಾರ್ವಭೌಮತ್ವ ಕಾಪಾಡಿಕೊಂಡು ಬಂದಿದೆ’ ಎಂದು ತಿಳಿಸಿದ್ದಾರೆ.

‘ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಹಾಗೂ ಪ್ರತಿಷ್ಠಿತ ಸಂಘವಿದು. ಹಲವು ದಶಕಗಳಿಂದ ರಾಜಕೀಯ ಪಕ್ಷಗಳನ್ನು ಹಾಗೂ ಆಡಳಿತಾರೂಢ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಾ ಬಂದಿದೆ. ಸಾರ್ವಜನಿಕ ಹಿತ ಕಾಪಾಡುವಲ್ಲಿ ಸದಾ ಮುಂಚೂಣಿಯಲ್ಲಿದೆ’ ಎಂದು ಮೂವರೂ ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !