ಕ್ರೈಸ್ತ ಮಹಿಳೆ ಜೈಲಿನಿಂದ ಬಿಡುಗಡೆ

7
ನೆದರ್‌ಲ್ಯಾಂಡ್‌ಗೆ ತೆರಳಿಲ್ಲ: ಪಾಕಿಸ್ತಾನ ಸ್ಪಷ್ಟನೆ

ಕ್ರೈಸ್ತ ಮಹಿಳೆ ಜೈಲಿನಿಂದ ಬಿಡುಗಡೆ

Published:
Updated:
Deccan Herald

ಇಸ್ಲಾಮಾಬಾದ್‌/ಲಾಹೋರ್‌: ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ಬುಧವಾರ ಮಧ್ಯರಾತ್ರಿ ಮುಲ್ತಾನ್‌ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಆಸಿಯಾ ಬೀಬಿ ನೆದರಲ್ಯಾಂಡ್‌ಗೆ ತೆರಳಿದ್ದಾರೆ ಎನ್ನುವ ವರದಿಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ.

ಗಲ್ಲು ಶಿಕ್ಷೆಗೆ ಒಳಗಾಗಿದ್ದ 47 ವರ್ಷದ ಆಸಿಯಾ ಬೀಬಿಯನ್ನು ಆರೋಪಮುಕ್ತಗೊಳಿಸಿ ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದ್ದರಿಂದ ಬಿಡುಗಡೆ ಮಾಡಲಾಗಿದೆ.

ರಾವಲ್ಪಿಂಡಿಯಲ್ಲಿರುವ ನೂರ್‌ಖಾನ್‌ ವಾಯುನೆಲೆಗೆ ಆಸಿಯಾ ಬೀಬಿ ಅವರನ್ನು ಕರೆದೊಯ್ಯಲಾಗಿದೆ. ಅಲ್ಲಿಂದ ನೆದರ್‌ಲ್ಯಾಂಡ್‌ಗೆ ತೆರಳಲಿದ್ದಾರೆ ಎಂದು ಸ್ಥಳೀಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿತ್ತು. ಇದೇ ಸುದ್ದಿಯನ್ನು ಕೆಲವು ವಾಹಿನಿಗಳು ಸಹ ಪ್ರಸಾರ ಮಾಡಿದ್ದವು.

ಈ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಆಸಿಯಾ ಬೀಬಿ ದೇಶ ಬಿಟ್ಟು ಹೋಗಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಡಾ. ಮೊಹ್ಮದ್‌ ಫಸಲ್‌ ಸ್ಪಷ್ಟನೆ ನೀಡಿದ್ದಾರೆ.

ವಾರ್ತಾ ಸಚಿವ ಫವಾದ್‌ ಚೌಧರಿ ಸಹ ಈ ಸುದ್ದಿಯನ್ನ ಅಲ್ಲಗಳೆದಿದ್ದು, ಯಾವುದೇ ಸತ್ಯಾಂಶ ಇಲ್ಲ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !