ಅಬುಲ್ ಕಲಾಂ ಬದಲು ಅಬ್ದುಲ್‌ ಕಲಾಂ ಜಯಂತಿ..!

7
ಸಿಂದಗಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರ ಎಡವಟ್ಟು

ಅಬುಲ್ ಕಲಾಂ ಬದಲು ಅಬ್ದುಲ್‌ ಕಲಾಂ ಜಯಂತಿ..!

Published:
Updated:
Deccan Herald

ಸಿಂದಗಿ (ವಿಜಯಪುರ): ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ, ಶಿಕ್ಷಣ ತಜ್ಞ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ನ.11ರಂದು. ಶಿಕ್ಷಣ ಇಲಾಖೆ ಈ ದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸುತ್ತದೆ.

ಸಿಂದಗಿ ಬಿಇಒ ಕಾರ್ಯಾಲಯದಿಂದ ಎಲ್ಲ ಶಾಲೆಗಳಲ್ಲಿ ಮೌಲಾನಾ ಜಯಂತಿ ಆಚರಿಸಲು ಸೂಚನೆ ಹೊರಡಿಸಲಾಗಿತ್ತು. ಆದರೆ ಕೆಲ ಶಾಲೆಗಳ ಶಿಕ್ಷಕರು, ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಬದಲು, ಮಾಜಿ ರಾಷ್ಟ್ರಪತಿ ದಿ.ಎಪಿಜೆ ಅಬ್ದುಲ್‌ ಕಲಾಂ ಭಾವಚಿತ್ರವಿಟ್ಟು ಭಾನುವಾರ ಜಯಂತಿ ಆಚರಿಸಿರುವುದು ಬೆಳಕಿಗೆ ಬಂದಿದೆ.

ಜಯಂತಿ ಆಚರಣೆ ಬಳಿಕ ಆಯಾ ಶಾಲೆಯ ಶಿಕ್ಷಕರು ಸಿಆರ್‌ಪಿ, ಬಿಆರ್‌ಪಿ ರಚಿಸಿರುವ ವಾಟ್ಸ್ ಆ್ಯಪ್‌ ಗ್ರೂಪ್‌ಗಳಲ್ಲಿ ಫೋಟೋ ಅಪ್‌ಲೋಡ್‌ ಮಾಡಿದ್ದು, ನಗೆಪಾಟಲಿಗೆ ಗುರಿಯಾಗಿದೆ.

ತಾಲ್ಲೂಕಿನ ಬಹುತೇಕ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನೇ ಪೂಜಿಸಿದ್ದಾರೆ. ಈ ಬಗ್ಗೆ ಕೆಲ ಶಿಕ್ಷಕರನ್ನು ಪ್ರಶ್ನಿಸಿದಾಗ ‘ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಭಾವಚಿತ್ರ ನಮಗೇನು ಗೊತ್ರೀ. ನಾವು ಅವರ ಭಾವಚಿತ್ರವನ್ನೇ ನೋಡಿಲ್ಲ’ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !