ಯುಎಇ: ಕೋರ್ಟ್‌ನಲ್ಲಿ ಹಿಂದಿ ಬಳಕೆಗೆ ನಿರ್ಧಾರ

7

ಯುಎಇ: ಕೋರ್ಟ್‌ನಲ್ಲಿ ಹಿಂದಿ ಬಳಕೆಗೆ ನಿರ್ಧಾರ

Published:
Updated:
Prajavani

ದುಬೈ: ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ನ್ಯಾಯಾಲಯಗಳಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಎಂಬ ಸ್ಥಾನಮಾನ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಬಹುಸಂಖ್ಯೆಯಲ್ಲಿರುವ ವಲಸಿಗರಿಗೂ ನ್ಯಾಯಿಕ ಪ್ರಕ್ರಿಯೆಯ ನಡಾವಳಿ ಸಿಗುವಂತಾಗಬೇಕು ಎಂಬ ಕಾರಣಕ್ಕಾಗಿ ಈಗಾಗಲೇ ಬಳಕೆಯಲ್ಲಿರುವ ಅರೇಬಿಕ್‌ ಹಾಗೂ ಇಂಗ್ಲಿಷ್‌ ಜೊತೆಗೆ ಹಿಂದಿಗೂ ಈ ಸ್ಥಾನಮಾನ ನೀಡಲಾಗಿದೆ.

ಸರ್ಕಾರದ ಅಂಕಿ–ಅಂಶಗಳ ಪ್ರಕಾರ ಯುಎಇ ಜನಸಂಖ್ಯೆ 90 ಲಕ್ಷ ಇದ್ದರೆ, ಭಾರತೀಯರ ಸಂಖ್ಯೆ 25 ಲಕ್ಷ ಇದೆ.

‘ನೋಂದಣಿ ಪ್ರಕ್ರಿಯೆ, ಕ್ಲೇಮುಗಳಿಗಾಗಿ ಅರ್ಜಿ ಭರ್ತಿ ಮಾಡುವುದು, ಕೋರ್ಟ್‌ನ ಆದೇಶಗಳನ್ನು ಅರ್ಥೈಸಿಕೊಳ್ಳಲು ಅನುಕೂಲವಾಗುವಂತೆ ಹಿಂದಿ ಭಾಷೆ ಬಳಕೆಗೆ ಅನುಮತಿ ನೀಡಲಾಗಿದೆ. ನ್ಯಾಯಿಕ ಪ್ರಕ್ರಿಯೆಯಲ್ಲಿ ಹೆಚ್ಚು ಪಾರದರ್ಶಕತೆ ತರಬೇಕು ಎಂಬ ಉದ್ದೇಶವೂ ಇದರಲ್ಲಿದೆ’ ಎಂದು ಅಬುಧಾಬಿ ನ್ಯಾಯಿಕ ಇಲಾಖೆಯ ಅಧೀನ ಕಾರ್ಯದರ್ಶಿ ಯೂಸೆಫ್‌ ಸಯೀದ್‌ ಅಲ್‌ ಅಬ್ರಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !