ವಿದ್ಯಾರ್ಥಿಗಳು ಕಲಿಕೆ ಒತ್ತು ನೀಡಬೇಕು: ಜೈನ್ ವಿ.ವಿ ಕುಲಪತಿ ಸಂದೀಪ್‌ ಶಾಸ್ತ್ರಿ

7

ವಿದ್ಯಾರ್ಥಿಗಳು ಕಲಿಕೆ ಒತ್ತು ನೀಡಬೇಕು: ಜೈನ್ ವಿ.ವಿ ಕುಲಪತಿ ಸಂದೀಪ್‌ ಶಾಸ್ತ್ರಿ

Published:
Updated:
Deccan Herald

ಬೆಂಗಳೂರು: ‘ವಿಶ್ವವಿದ್ಯಾಲಯಗಳು ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚಿಸದೆ ಪಠ್ಯಕ್ಕೆ ಮಾತ್ರ ಸೀಮಿತವಾಗಿವೆ. ಇಂಥ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು’ ಎಂದು ಜೈನ್ ವಿಶ್ವವಿದ್ಯಾಲಯ ಕುಲಪತಿ ಸಂದೀಪ್‌ ಶಾಸ್ತ್ರಿ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ‘ರಾಜ್ಯಮಟ್ಟದ ಕಾರ್ಯಗಾರ’ದಲ್ಲಿ ಮಾತನಾಡಿದ ಅವರು, ‘ಶಿಕ್ಷಕರ ಬೋಧನೆಗಿಂತ ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡಬೇಕು’ ಎಂದರು.

‘ಚುನಾವಣೆಗಳು ದೇಶದಲ್ಲಿ ಸಾಮಾಜಿಕ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. 1998ರಲ್ಲಿ ಸಂದರ್ಭದಲ್ಲಿ ಚುನಾವಣೆಗಳ ಸಮೀಕ್ಷೆಗೆ ನನ್ನ ವಿದ್ಯಾರ್ಥಿಗಳು ಹೋಗುತ್ತಿದ್ದರು. ಕೆಲವರು ಚುನಾವಣೆ ಪ್ರಚಾರ, ಮತದಾನದ ವಿಧಾನ, ಜನರ ಅಭಿಪ್ರಾಯಗಳನ್ನು ಸಂಶೋಧಿಸಿ ವಿಶ್ಲೇಷಿಸುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಕಲಿತಿರುವುದಕ್ಕಿಂತ ಹೆಚ್ಚಾಗಿ ಕಲಿತಿದ್ದೇವೆ ಎಂಬುದನ್ನ ಹೇಳಿದ್ದರು. ಪ್ರಾಯೋಗಿಕ ಕಲಿಗೆ ಮಹತ್ವ ನೀಡಬೇಕು’ ಎಂದು ವಿವರಿಸಿದರು.

‘ಹೊಟ್ಟೆಪಾಡಿಗಾಗಿ ಕಲಿಯುವ ಶಿಕ್ಷಣ ವ್ಯವಸ್ಥೆಯನ್ನು ಅವಿದ್ಯೆ ಎನ್ನುವರು. ಪರಂಪರೆ, ಸಂಸ್ಕೃತಿ ಸೇರಿದಂತೆ ರಾಷ್ಟ್ರೀಯತೆ ಬೆಳೆಸಲು ಕಲಿಯುವುದು ವಿದ್ಯೆ’ ಎಂದು ಎಬಿವಿಪಿ ಅಧ್ಯಕ್ಷ ಅಲ್ಲಮಪ್ರಭು ಗುಡ್ಡ ಹೇಳಿದರು.

ಸಮಾನತೆ ಸಿಗಲಿದೆಯೇ?

‘ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಹೋರಾಡಿದಾಗ ಅಲ್ಲಿನ ಕೆಲವರು ಅಂಬೇಡ್ಕರ್ ಹೆಸರಿನಲ್ಲಿ ನಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದರು. ಸಮಾಜವನ್ನು ಒಂದು ಸಮಗ್ರ ದೃಷ್ಟಿಕೋನದಿಂದ ಕಾಣುವ ವಿಶ್ವವಿದ್ಯಾಲಯದಲ್ಲಿ ಜಾತಿವಾದಿ ಪ್ರವೃತ್ತಿಗಳು ಬೆಳೆದು ನಿಂತಿರುವುದನ್ನು ಇಲ್ಲಿ ಕಾಣಬಹುದು’ ಎಂದು ವಿದ್ಯಾರ್ಥಿ ಶಿವಕುಮಾರ್ ಹೇಳಿದರು. ಇದರ ಮಧ್ಯೆ ಸಿಕ್ಕ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿದ್ದರೆ ಶಿಕ್ಷಣ ವ್ಯವಸ್ಥೆ ಬದಲಾಗುತ್ತದೆಯೇ? ಸಮಾನತೆ ಸಿಗಲಿದೆಯೇ ಎಂದು ಪ್ರಶ್ನಿಸಿದ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ರವೀಣ್, ಅವರ ಮಾತಿಗೆ ದನಿಗೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !