ಪರಿಹಾರ ವಿತರಣೆ ವಿಳಂಬ: ಎಸಿ ಕಚೇರಿ ಜಪ್ತಿ

7

ಪರಿಹಾರ ವಿತರಣೆ ವಿಳಂಬ: ಎಸಿ ಕಚೇರಿ ಜಪ್ತಿ

Published:
Updated:
Prajavani

ಇಂಡಿ: ಯುಕೆಪಿ ಕಾಲುವೆ ನಿರ್ಮಾಣಕ್ಕಾಗಿ ಜಮೀನು ವಶಪಡಿಸಿಕೊಂಡಿದ್ದ ಸಂತ್ರಸ್ತರಿಗೆ, ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದರಿಂದ, ಇಲ್ಲಿನ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲಾಯಿತು.

ಸಿಂದಗಿ ತಾಲ್ಲೂಕಿನ ಅಸ್ಕಿ ಗ್ರಾಮದ ರೈತರಾದ ಕರೆಪ್ಪ ಸಿದ್ದಪ್ಪ ಹಿರೇಕುರುಬರ, ಸಿದ್ದಪ್ಪ ಭೀಮಪ್ಪ ಹಿರೇಕುರುಬರ, ಕಾಶೀಬಾಯಿ ಭೀಮಪ್ಪ ಹಿರೇಕುರುಬರ, ಮಡಿವಾಳಪ್ಪ ಭೀಮಪ್ಪ ಹಿರೇಕುರುಬರ ಮತ್ತು ಮಡಿವಾಳಪ್ಪ ಮಹಾದೇವಪ್ಪ ಹಿರೇಕುರುಬರ ಅವರಿಗೆ ಸರ್ಕಾರ ನೀಡಬೇಕಿದ್ದ ₹ 1,55,423 ಪರಿಹಾರ ನೀಡಲು ವಿಫಲವಾಗಿರುವುದರಿಂದ ಈ ಜಪ್ತಿ ನಡೆಯಿತು.

ವಕೀಲರಾದ ಎಸ್.ಎಸ್.ಮಮದಾಪುರ ಅವರು ರೈತರ ಪರವಾಗಿ ಪರಿಹಾರಕ್ಕಾಗಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !