ಭೂದಾಖಲೆಗಳ ಕಚೇರಿ ತಪಾಸಕ ಎಸಿಬಿ ಬಲೆಗೆ

7

ಭೂದಾಖಲೆಗಳ ಕಚೇರಿ ತಪಾಸಕ ಎಸಿಬಿ ಬಲೆಗೆ

Published:
Updated:

ವಿಜಯಪುರ: ಪಿಟಿಶೀಟ್ ತಯಾರಿಸಲು ₹5000 ಲಂಚದ ಬೇಡಿಕೆ ಇಟ್ಟಿದ, ಇಂಡಿ ಎಡಿಎಲ್ಆರ್ ಕಚೇರಿ ತಪಾಸಕ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಸದಾಶಿವ ಚಂದ್ರಶೇಖರ ದಾನಪ್ಪಗೋಳ ಎಸಿಬಿ ಬಲೆಗೆ ಬಿದ್ದಿರುವ ನೌಕರ.

ಇಂಡಿ ತಾಲ್ಲೂಕಿನ ಚವಡಿಹಾಳ ಗ್ರಾಮದ ಯಶವಂತ ಬರಗಾಲಿ ಪೂಜಾರಿ ಅವರ ಚೋರಗಿ ಗ್ರಾಮದ ಸರ್ವೇ ನಂಬರ್‌ 125/1,2,3,4,5ನೇ ಜಮೀನುಗಳ ಪಿಟಿಶೀಟ್‌ನಲ್ಲಿ ಮೀಟರ್‌ ಅಳತೆಯಲ್ಲಿ ತಪ್ಪಾಗಿದ್ದರಿಂದ ಡಿಡಿಎಲ್ಆರ್ ವಿಜಯಪುರ ಕಚೇರಿಯಲ್ಲಿ ಪಿಟಿಶೀಟ್ ರದ್ದುಪಡಿಸಲಾಗಿತ್ತು.

ಈ ಸರ್ವೇ ನಂಬರಿನ 5 ಪಟ್ಟಿಯ ಹೊಸದಾಗಿ ಪಿಟಿಶೀಟ್ ತಯಾರಿಸಲು ಸದಾಶಿವ ಚಂದ್ರಶೇಖರ ದಾನಪ್ಪಗೋಳ, ಪೂಜಾರಿ ಅವರಿಂದ ₹ 5000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಹಣ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !