ಬುಧವಾರ, ಸೆಪ್ಟೆಂಬರ್ 18, 2019
22 °C

ಎಸಿಬಿ ಬಲೆಗೆ ಬಾಗೇವಾಡಿ ಎಫ್‌ಡಿಎ

Published:
Updated:

ವಿಜಯಪುರ: ಜಿಲ್ಲಾಧಿಕಾರಿ ಕಚೇರಿಯಿಂದ ಅನುಮೋದನೆಗೊಂಡು ಬಂದ ಜಮೀನಿನ ಎನ್‌ಎ ಕಡತ ಪ್ರಕ್ರಿಯೆ ಪೂರ್ಣಗೊಳಿಸಿಕೊಡಲು, ₹ 5000 ಲಂಚ ಪಡೆಯುತ್ತಿದ್ದ ಬಸವನಬಾಗೇವಾಡಿ ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಎಸಿಬಿ ಪೊಲೀಸರು ಸೋಮವಾರ ವಿಜಯಪುರದಲ್ಲಿ ಬಂಧಿಸಿದ್ದಾರೆ.

ಪಿ.ಎಸ್.ಹುಡೇದ ಎಸಿಬಿ ಪೊಲೀಸರ ದಾಳಿಯಲ್ಲಿ ಬಲೆಗೆ ಸಿಕ್ಕಿಬಿದ್ದವ.

ಸಚಿನ್‌ ಡೊಂಬಳೆ ಎಂಬುವವರು ತಮ್ಮ ಜಮೀನಿನ ಎನ್‌ಎ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಸವನಬಾಗೇವಾಡಿ ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪಿ.ಎಸ್.ಹುಡೇದ ಬಳಿ ಮಾತನಾಡಿದ್ದಾರೆ. ಈ ಸಂದರ್ಭ ಹುಡೇದ ಕಡತ ಅಂತಿಮಗೊಳಿಸಲು ₹ 8000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಚೌಕಾಶಿಯ ಮಾತುಕತೆಯಂತೆ ಸೋಮವಾರ ವಿಜಯಪುರದಲ್ಲಿ ₹ 5000 ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿ, ಕೆಲ ದಾಖಲೆಗಳನ್ನು ವಶಕ್ಕೆ ಪಡೆದು, ಬಂಧಿಸಿದ್ದೇವೆ ಎಂದು ಎಸಿಬಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)