‘ಬೆಸ್ಕಾಂ’ ಎಇ ತೌಸಿಫ್‌ ಎಸಿಬಿ ಬಲೆಗೆ

ಶನಿವಾರ, ಮೇ 25, 2019
22 °C
₹ 1.10 ಲಕ್ಷ ಲಂಚ ಪಡೆಯುವಾಗ ಬಂಧನ

‘ಬೆಸ್ಕಾಂ’ ಎಇ ತೌಸಿಫ್‌ ಎಸಿಬಿ ಬಲೆಗೆ

Published:
Updated:
Prajavani

ಬೆಂಗಳೂರು: ಗೃಹಪಯೋಗಿ ಮೀಟರ್‌ ಅನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ₹ 1.10 ಲಕ್ಷ ಲಂಚ ಪಡೆದ ಬೆಂಗಳೂರು ವಿದ್ಯುತ್ ಕಂಪನಿ (ಬೆಸ್ಕಾಂ) ಸಹಾಯಕ ಎಂಜಿನಿಯರ್‌ ತೌಸಿಫ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ತೌಸಿಫ್‌ ಪರವಾಗಿ ₹ 1.10 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ಮೀಟರ್‌ ರೀಡರ್‌ ಶಿವ ಎಂಬಾತನನ್ನೂ ಬಂಧಿಸಲಾಗಿದೆ. ಇಲ್ಲಿನ ಕಗ್ಗದಾಸನಪುರದ ನಿವಾಸಿಯೊಬ್ಬರು ಗೃಹ‍ಪಯೋಗಿ ಮೀಟರ್‌ ಅನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ಸಹಾಯಕ ಎಂಜಿನಿಯರ್‌ ₹ 1.10 ಲಕ್ಷ ಲಂಚ ಕೇಳಿದ್ದರು.

ಲಂಚದ ಹಣವನ್ನು ತಮ್ಮದೇ ಕಚೇರಿಯ ಗುತ್ತಿಗೆ ನೌಕರ, ಮೀಟರ್‌ ರೀಡರ್‌ ಶಿವನಿಗೆ ತಲುಪಿಸುವಂತೆ ತೌಸಿಫ್‌ ಪಿರ್ಯಾದಿಗೆ ಹೇಳಿದ್ದರು. ಭುವನೇಶ್ವರಿ ನಗರದ, ಭುವನೇಶ್ವರಿ ದೇವಸ್ಥಾನದ ಬಳಿ ದೂರುದಾರರಿಂದ ಶಿವ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದರು. ಆನಂತರ, ಸಹಾಯಕ ಎಂಜಿನಿಯರ್‌ ಅವರನ್ನೂ ಬಂಧಿಸಲಾಯಿತು.

ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಚಂದ್ರಶೇಖರ್‌ ಅವರ ಮಾರ್ಗದರ್ಶನದಲ್ಲಿ, ಎಸ್‌ಪಿ ಡಾ. ಸಂಜೀವ ಪಾಟೀಲರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಬರಹ ಇಷ್ಟವಾಯಿತೆ?

  • 5

    Happy
  • 1

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !