ಲಂಚ ಪ್ರಕರಣ: ‘ಬೆಸ್ಕಾಂ’ ಎ.ಇ ತೌಸಿಫ್‌ ಎಸಿಬಿ ಬಲೆಗೆ

ಸೋಮವಾರ, ಮೇ 20, 2019
30 °C
₹ 1.10 ಲಕ್ಷ ಲಂಚ ಪಡೆಯುವಾಗ ಬಂಧನ

ಲಂಚ ಪ್ರಕರಣ: ‘ಬೆಸ್ಕಾಂ’ ಎ.ಇ ತೌಸಿಫ್‌ ಎಸಿಬಿ ಬಲೆಗೆ

Published:
Updated:
Prajavani

ಬೆಂಗಳೂರು: ಗೃಹೋಪಯೋಗಿ ಮೀಟರ್‌ ಅನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ₹ 1.10 ಲಕ್ಷ ಲಂಚ ಪಡೆದ ಬೆಂಗಳೂರು ವಿದ್ಯುತ್ ಕಂಪನಿ (ಬೆಸ್ಕಾಂ) ಸಹಾಯಕ ಎಂಜಿನಿ ಯರ್‌ ತೌಸಿಫ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ತೌಸಿಫ್‌ ಪರವಾಗಿ ₹ 1.10 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ಮೀಟರ್‌ ರೀಡರ್‌ ಶಿವು ಅಲಿಯಾಸ್‌ ಶಿವಕುಮಾರ್‌ ಎಂಬಾತನನ್ನೂ ಬಂಧಿಸ ಲಾಗಿದೆ. ಇಲ್ಲಿನ ಕಗ್ಗದಾಸನಪುರ ನಿವಾಸಿಯೊಬ್ಬರು ತಮ್ಮ ಕಟ್ಟಡಕ್ಕೆ ಪಡೆದಿದ್ದ ಗೃಹೋ‍ಪಯೋಗಿ ಮೀಟರ್‌ ಅನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲು ಕೋರಿ ಪೈ ಬಡಾವಣೆಯಲ್ಲಿರುವ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಇ–10ಗೆ ಅರ್ಜಿ ಕೊಟ್ಟಿದ್ದರು. ಈ ಕೆಲಸ ಮಾಡಿಕೊಡಲು ಸಹಾಯಕ ಎಂಜಿನಿಯರ್‌ ₹ 1.10 ಲಕ್ಷ ಲಂಚ ಕೇಳಿದ್ದರು. ಲಂಚದ ಹಣವನ್ನು ತಮ್ಮದೇ ಕಚೇರಿ ಗುತ್ತಿಗೆ ನೌಕರ, ಮೀಟರ್‌ ರೀಡರ್‌ ಶಿವನಿಗೆ ತಲುಪಿಸುವಂತೆ ತೌಸಿಫ್‌ ಫಿರ್ಯಾದಿಗೆ ಹೇಳಿದ್ದರು. ಭುವನೇಶ್ವರಿ ನಗರದ, ಭುವನೇಶ್ವರಿ ದೇವಸ್ಥಾನದ ಬಳಿ ದೂರುದಾರರಿಂದ ಶಿವು ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ಬಂಧಿಸಿದರು. ಆನಂತರ, ಸಹಾಯಕ ಎಂಜಿನಿಯರನ್ನೂ ಬಂಧಿಸಲಾಯಿತು. ಆರೋಪಿಗಳಿಂದ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಚಂದ್ರಶೇಖರ್‌ ಅವರ ಮಾರ್ಗದರ್ಶನದಲ್ಲಿ, ಎಸ್‌ಪಿ ಡಾ. ಸಂಜೀವ ಪಾಟೀಲರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 8

    Happy
  • 1

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !