ಅಪಘಾತ: ಬೈಕ್ ಸವಾರ ಸಾವು

ಭಾನುವಾರ, ಏಪ್ರಿಲ್ 21, 2019
32 °C

ಅಪಘಾತ: ಬೈಕ್ ಸವಾರ ಸಾವು

Published:
Updated:

ಮುದ್ದೇಬಿಹಾಳ: ತಂಗಡಗಿ ರಸ್ತೆಯಲ್ಲಿ (ಮುದ್ನಾಳ ಬಳಿ) ಸೋಮವಾರ ಸಂಜೆ ಚಲಿಸುತ್ತಿದ್ದ ಬೈಕಿಗೆ, ಹಿಂಬದಿಯಿಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡಿದಿದ್ದರಿಂದ, ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಘಾಳಪೂಜಿ ಗ್ರಾಮದ ಯಮನಪ್ಪ ಶರಣಪ್ಪ ವಾಲಿಕಾರ (29) ಮೃತ ಯುವಕ ಎಂದು ಗುರುತಿಸಲಾಗಿದೆ.

ಇನ್ನೊಂದು ಬೈಕಿನಲ್ಲಿದ್ದ ವ್ಯಕ್ತಿ ಸಹ ಗಂಭೀರ ಗಾಯಗೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದು, ಇವರನ್ನು ತಾಲ್ಲೂಕಿನ ವೀರೇಶ ನಗರದ ವೀರೇಶ ಬಸಪ್ಪ ಬರದೇನಾಳ ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !