ಅಪಘಾತ: ತಾಯಿ ಬಿಟ್ಟು ಮನೆಗೆ ಹೊರಟಿದ್ದವ ಸಾವು

ಬುಧವಾರ, ಜೂಲೈ 24, 2019
24 °C

ಅಪಘಾತ: ತಾಯಿ ಬಿಟ್ಟು ಮನೆಗೆ ಹೊರಟಿದ್ದವ ಸಾವು

Published:
Updated:

ಬೆಂಗಳೂರು: ಹೆಣ್ಣೂರು ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಸ್ಕೂಟರ್‌ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸವಾರ ವಿಕ್ರಾಂತ್‌ ಕುಮಾರ್ (25) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೆದ್ದಲಹಳ್ಳಿಯಲ್ಲಿ ವಾಸವಿದ್ದ ವಿಕ್ರಾಂತ್‌ ತಮ್ಮ ತಾಯಿಯನ್ನು ಮನೆಗೆಲಸಕ್ಕೆ ಬಿಟ್ಟು ವಾಪಸ್ ಮನೆಗೆ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ.

‘ಬಿಹಾರದವರಾದ ವಿಕ್ರಾಂತ್ ತಾಯಿ ಜೊತೆ ಕೆಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ತಾಯಿ ನಿತ್ಯವೂ ಮನೆಗೆಲಸಕ್ಕೆ ಹೋಗುತ್ತಿದ್ದರು. ಅರೆಕಾಲಿಕ ಕೆಲಸ ಮಾಡುತ್ತಿದ್ದ ವಿಕ್ರಾಂತ್ ನಗರದ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿದ್ದರು. ಸದ್ಯ ತಮ್ಮ ವಿದ್ಯಾರ್ಹತೆಗೆ ಸೂಕ್ತವಾದ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು’ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.

‘ತಾಯಿಯೇ ಇತ್ತೀಚೆಗೆ ಮಗನಿಗೆ ಹೊಸ ಸ್ಕೂಟರ್‌ ಖರೀದಿಸಿಕೊಟ್ಟಿದ್ದರು. ‘ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !