ವಿಜಯಪುರ ನಗರದ ಹೊರವಲಯದಲ್ಲಿ ಲಾರಿ–ಬೈಕ್‌ ಮಧ್ಯೆ ಭೀಕರ ಅಪಘಾತ: ನಾಲ್ವರ ದುರ್ಮರಣ

ಮಂಗಳವಾರ, ಮೇ 21, 2019
31 °C

ವಿಜಯಪುರ ನಗರದ ಹೊರವಲಯದಲ್ಲಿ ಲಾರಿ–ಬೈಕ್‌ ಮಧ್ಯೆ ಭೀಕರ ಅಪಘಾತ: ನಾಲ್ವರ ದುರ್ಮರಣ

Published:
Updated:

ವಿಜಯಪುರ: ನಗರದ ಹೊರವಲಯ ತೊರವಿ ಲಂಬಾಣಿ ತಾಂಡಾ ಕ್ರಾಸ್ ಬಳಿ ಮಂಗಳವಾರ ನಡೆದ ಲಾರಿ, ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ವಿಜಯಪುರದ ಶಹಾಪೇಟೆಯ ಮನ್ಸೂರ್ ವಜೀರ್‌ಸಾಬ್‌ ನಾಯ್ಕೋಡಿ (55), ಹುಸೇನ್‌ಸಾಬ್‌ ನಬಿಸಾಬ್ ಹಳ್ಳಿ (50), ತಿಕೋಟಾ ತಾಲ್ಲೂಕಿನ ರಾಂಪುರ ಗ್ರಾಮದ ಪರಸಪ್ಪ ವಿಠ್ಠಲ ಮಾಡ್ಯಾಗೋಳ್ (40), ಅನಿಲ ಸಿದ್ದಪ್ಪ ಸಾಸಲಟ್ಟಿ ಮೃತರು.

ಅಥಣಿ ರಿಂಗ್‌ರೋಡ್‌ನಿಂದ ಸೊಲ್ಲಾಪುರ ರಿಂಗ್‌ ರೋಡ್‌ನತ್ತ ಚಲಿಸುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಲಾರಿ, ತೊರವಿ ತಾಂಡಾದಿಂದ ರಿಂಗ್‌ರೋಡ್‌ಗೆ ಸೇರ್ಪಡೆಯಾಗಲು ಬಂದ ರಾಂಪುರದ ಪರಸಪ್ಪ, ಸಿದ್ದಪ್ಪ ಅವರಿದ್ದ ಬೈಕ್‌ಗೆ ಗುದ್ದಿದೆ.

ನಂತರ ಸೊಲ್ಲಾಪುರ ರಿಂಗ್‌ ರೋಡ್‌ನಿಂದ ಅಥಣಿ ರಿಂಗ್‌ರೋಡ್‌ನತ್ತ ಬರುತ್ತಿದ್ದ ನಗರದ ಮನ್ಸೂರ್‌, ಹುಸೇನ್‌ಸಾಬ್‌ ಚಲಿಸುತ್ತಿದ್ದ ಬೈಕ್‌ಗೆ ಮುಖಾಮುಖಿಯಾಗಿ ಗುದ್ದಿದೆ. ಅಪಘಾತದ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟರೇ, ಇನ್ನಿಬ್ಬರು ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಾದರೂ; ಸ್ಪಂದಿಸದೆ ಮೃತರಾದರು ಎಂದು ಸಂಚಾರ ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 4

    Sad
  • 0

    Frustrated
  • 1

    Angry

Comments:

0 comments

Write the first review for this !