ಕ್ಯಾಂಟರ್–ಲಾರಿ ಡಿಕ್ಕಿ: ಒಬ್ಬರು ಸಾವು

ಶನಿವಾರ, ಮೇ 25, 2019
22 °C

ಕ್ಯಾಂಟರ್–ಲಾರಿ ಡಿಕ್ಕಿ: ಒಬ್ಬರು ಸಾವು

Published:
Updated:
Prajavani

ಹೊರ್ತಿ (ವಿಜಯಪುರ): ಗ್ರಾಮದ ರಾಷ್ಟ್ರೀಯ ಹೆದ್ದಾರಿ-13ರ ದೇಗಿನಾಳ ಕ್ರಾಸ್ ಬಳಿ ಬುಧವಾರ ಬೆಳಗಿನ ಜಾವ ಎರಡು ಸರಕು ಸಾಗಣೆ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಒಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಹರಿಯಾಣದ ಸುಭಾಷ ಕಜಾನಾ(52) ಮೃತಪಟ್ಟವರು. ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಹೊರ್ತಿ ಠಾಣೆಯ ಪಿಎಸ್ಐ ಶಿವಾನಂದ ಅಂಬಿಗೇರ ತಿಳಿಸಿದ್ದಾರೆ. ಖಾಲಿ ರಟ್ಟಿನ ಬಾಕ್ಸ್‌ ತುಂಬಿದ್ದ ಲಾರಿ, ಹರ್ಬಲ್ ಬಾಕ್ಸ್‌ ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಅಪಘಾತದ ರಭಸಕ್ಕೆ ರಸ್ತೆಯಲ್ಲಿ ರಟ್ಟಿನ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿದ್ದವು.

ಎರಡು ಅಗ್ನಿಶಾಮಕ ವಾಹನಗಳು ಹಾಗೂ ಜೆಸಿಬಿ ಮತ್ತು ಕ್ರೇನ್‌ಗಳ ಸಹಾಯದಿಂದ ರಟ್ಟಿನ ಬಾಕ್ಸ್‌ ಹೊರಗೆತೆಗೆದು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಲಾಯಿತು. ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !