ಅಪಘಾತ: ದೈಹಿಕ ಶಿಕ್ಷಕ ಸಾವು

7

ಅಪಘಾತ: ದೈಹಿಕ ಶಿಕ್ಷಕ ಸಾವು

Published:
Updated:

ಬೆಂಗಳೂರು: ತುಮಕೂರು ರಸ್ತೆಯ ನವಯುಗ ಟೋಲ್‌ ಬಳಿ ಬೈಕ್‌ಗೆ ಕ್ಯಾಂಟರ್‌ ವಾಹನ ಗುದ್ದಿದ್ದರಿಂದ ಸವಾರ ರಾಕೇಶ್‌ (22) ಎಂಬುವರು ಮೃತಪಟ್ಟಿದ್ದಾರೆ.

ದಾಸನಪುರ ನಿವಾಸಿಯಾಗಿದ್ದ ರಾಕೇಶ್, ಉಲ್ಲಾಳ ಉಪನಗರ ಬಳಿಯ ವಿದ್ಯಾನಿಕೇತನ ಶಾಲೆಯ ದೈಹಿಕ ಶಿಕ್ಷಕರಾಗಿದ್ದರು. 

‘ಭಾನುವಾರ ಶಾಲೆಗೆ ರಜೆ ಇದ್ದಿದ್ದರಿಂದ ರಾಕೇಶ್ ಅವರು ದೊಡ್ಡಜಾಲದಲ್ಲಿರುವ ದೊಡ್ಡಮ್ಮನ ಮನೆಗೆ ಬೆಳಿಗ್ಗೆಯೇ ಹೋಗಿದ್ದರು. ರಾತ್ರಿವರೆಗೂ ಅಲ್ಲಿಯೇ ಇದ್ದ ಅವರು 9 ಗಂಟೆಯ ನಂತರ ತಮ್ಮೂರಿನತ್ತ ಬೈಕ್‌ನಲ್ಲಿ ಹೊರಟಿದ್ದರು. ಪೀಣ್ಯದ ಮೇಲ್ಸೇತುವೆಯಲ್ಲಿ ಬೈಕ್‌ ಓಡಿಸಿಕೊಂಡು ಟೋಲ್‌ ಬಳಿ ಬಂದಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಕ್ಯಾಂಟರ್, ಬೈಕ್‌ಗೆ ಗುದ್ದಿತ್ತು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ಪೀಣ್ಯ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಕೇಶ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು’ ಎಂದು ತಿಳಿಸಿದರು.

‘ಕ್ಯಾಂಟರ್‌ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ಚಾಲಕ ಆಶಿಫ್‌ನನ್ನು ಬಂಧಿಸಿ ಕ್ಯಾಂಟರ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 1

    Sad
  • 0

    Frustrated
  • 0

    Angry

Comments:

0 comments

Write the first review for this !