ಶನಿವಾರ, ಅಕ್ಟೋಬರ್ 19, 2019
28 °C

ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರ ದುರ್ಮರಣ

Published:
Updated:

ಬೆಂಗಳೂರು: ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಅಪರಿಚಿತ ಕಾರು ಡಿಕ್ಕಿಯಾಗಿ ಸ್ಕೂಟರ್‌ ಸವಾರ ಕದಿರೇಶನ್‌ (55) ಎಂಬುವರು ಮೃತಪಟ್ಟ ಘಟನೆ ಭಾನುವಾರ ನಸುಕಿನಲ್ಲಿ ಸಂಭವಿಸಿದೆ. ಕದಿರೇಶನ್‌ ಅವರು ಶನಿವಾರ ರಾತ್ರಿ 8.15ರ ಸುಮಾರಿಗೆ ತಮ್ಮ ಸ್ಕೂಟರ್‌ನಲ್ಲಿ ವೇಲರ್ಸ್‌ ಎಕ್ಸ್‌ಟೆನ್ಷನ್ ರಸ್ತೆಯ ಎರಡನೇ ಅಡ್ಡರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

ತಲೆಗೆ ಗಂಭೀರವಾಗಿ ಗಾಯಗೊಂಡ ಕದಿರೇಶನ್‌ ಅವರನ್ನು ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಸುಕಿ ನಲ್ಲಿ ಸಾವು ಸಂಭವಿಸಿದೆ. ಲಿಕೇಶಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಸವಾರ ಸಾವು: ಆಯತಪ್ಪಿ ರಸ್ತೆಗೆ ಬಿದ್ದು ಬೈಕ್‌ ಸವಾರ ಮೃತಪಟ್ಟ ಘಟನೆ ಬಾಣಸವಾಡಿಯ ಹೆಣ್ಣೂರು ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಓಎಂಬಿಆರ್ ಲೇಔಟ್‌ ನಿವಾಸಿ ರೋಹಿತ್‌ (28) ಮೃತಪಟ್ಟವರು.

ಕೆಲಸಕ್ಕಾಗಿ ಹುಡುಕಾಡುತ್ತಿದ್ದ ರೋಹಿತ್‌, ಎಲ್ಲೋ ಹೋದವರು ಮುಂಜಾನೆ 4.15ರ ಸುಮಾರಿಗೆ ಪಲ್ಸರ್‌ ಬೈಕಿನಲ್ಲಿ ಮನೆಗೆ ವಾಪಾಸು ಬರುತ್ತಿದ್ದಾಗ ಘಟನೆ ನಡೆದಿದೆ.

ರಸ್ತೆಗೆ ಬಿದ್ದ ರೋಹಿತ್ ಅವರ ಮೇಲೆ ಅಪರಿಚಿತ ವಾಹನ ಹರಿದು ಹೋದ ಕಾರಣ ಸ್ಥಳದಲ್ಲೇ ಸಾವು ಸಂಭವಿಸಿದೆ.

Post Comments (+)