ಅಪಘಾತ; ಕ್ಯಾಬ್ ಚಾಲಕ ಸೇರಿ ಇಬ್ಬರ ಸಾವು

7

ಅಪಘಾತ; ಕ್ಯಾಬ್ ಚಾಲಕ ಸೇರಿ ಇಬ್ಬರ ಸಾವು

Published:
Updated:

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್ ಹಾಗೂ ಕೆ.ಜಿ.ಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಪಘಾತಗಳಲ್ಲಿ ಕ್ಯಾಬ್ ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಸರ್ಜಾಪುರ ರಸ್ತೆಯ ಹರಳೂರಿನ ಷಣ್ಮುಗಂ (35) ಹಾಗೂ ಡಿ.ಜೆ.ಹಳ್ಳಿಯ ನದೀಮ್ ಪಾಷಾ (22) ಮೃತರು. 

ಕ್ಯಾಬ್ ಚಾಲಕರಾಗಿದ್ದ ಷಣ್ಮುಗಂ, ಕಸವನಹಳ್ಳಿ ಬಳಿ ಬೈಕ್‌ನಲ್ಲಿ ಹೊರಟಿದ್ದರು. ಹಿಂದಿನಿಂದ ಬಂದ ಟ್ಯಾಂಕರ್, ಬೈಕ್‌ಗೆ ಗುದ್ದಿತ್ತು. ಕೆಳಗೆ ಬಿದ್ದ ಷಣ್ಮುಗಂ ಅವರ ಮೈ ಮೇಲೆಯೇ ಟ್ಯಾಂಕರ್‌ ಚಕ್ರಗಳು ಹರಿದಿದ್ದರಿಂದ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯಲ್ಲಿ ಹಿಂಬದಿ ಸವಾರ ಮಂಜುನಾಥ್‌ ಎಂಬುವರಿಗೂ ಗಾಯಗಳಾಗಿವೆ. ಟ್ಯಾಂಕರ್ ಚಾಲಕ ಹನುಮಂತಪ್ಪನನ್ನು ಬಂಧಿಸಲಾಗಿದೆ’ ಎಂದು ಎಚ್‌ಎಸ್‌ಆರ್‌ ಲೇಔಟ್ ಸಂಚಾರ ಪೊಲೀಸರು ತಿಳಿಸಿದರು. 

ಮತ್ತೊಂದು ಪ್ರಕರಣದಲ್ಲಿ ನರೇಂದ್ರ ಟೆಂಟ್‌ಹೌಸ್ ಬಳಿ ಟಿಪ್ಪರ್ ಲಾರಿ ಬೈಕ್‌ಗೆ ಗುದ್ದಿದ್ದರಿಂದ ನದೀಮ್ ಪಾಷಾ ಮೃತಪಟ್ಟಿದ್ದಾರೆ.

ಎಚ್‌ಬಿಆರ್ ಲೇಔಟ್‌ನ ಟಿ.ವಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನದೀಮ್, ರಾತ್ರಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಘವಿಸಿದೆ. ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಎಂದು ಕೆ.ಜಿ.ಹಳ್ಳಿ ಸಂಚಾರ ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !