ಟಂಟಂ ಪಲ್ಟಿ; ಇಬ್ಬರ ಸಾವು 

7

ಟಂಟಂ ಪಲ್ಟಿ; ಇಬ್ಬರ ಸಾವು 

Published:
Updated:
Prajavani

ಬಸವನಬಾಗೇವಾಡಿ: ಪಟ್ಟಣ ಹೊರ ವಲಯದಲ್ಲಿನ ವಿಜಯಪುರ ರಸ್ತೆಯಲ್ಲಿ ಶುಕ್ರವಾರ ಹತ್ತಿ ತುಂಬಿಕೊಂಡು ಚಲಿಸುತ್ತಿದ್ದ ಟಂಟಂ ಪಲ್ಟಿಯಾಗಿ, ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿದ್ದಾರೆ.

ತಾಳಿಕೋಟೆ ತಾಲ್ಲೂಕಿನ ತಮದಡ್ಡಿ ಗ್ರಾಮದ ಸಾಹೇಬಗೌಡ ಬಸವಂತ್ರಾಯ ಕುಂಟರೆಡ್ಡಿ (65), ಕೋಡೆಪ್ಪ ಗುರಪ್ಪ ಮಡಿವಾಳರ (60) ಮೃತರು.

ತಾಳಿಕೋಟೆ ಸಮೀಪದ ತಮದಡ್ಡಿ ಗ್ರಾಮದಿಂದ ಟಂಟಂನಲ್ಲಿ ಹತ್ತಿ ತುಂಬಿಕೊಂಡು, ವಿಜಯಪುರಕ್ಕೆ ತೆರಳುತ್ತಿದ್ದ ಮಾರ್ಗ ಮಧ್ಯದಲ್ಲಿ, ಚಾಲಕನ ನಿರ್ಲಕ್ಷ್ಯತನದಿಂದಾಗಿ ಟಂಟಂ ಪಲ್ಟಿಯಾಗಿದೆ. ಇದರಲ್ಲಿಯೇ ಪಯಣಿಸುತ್ತಿದ್ದ ಸಾಹೇಬಗೌಡ ಸ್ಥಳದಲ್ಲಿಯೇ ಮೃತಪಟ್ಟರೆ, ಕೋಡೆಪ್ಪ ಮಡಿವಾಳರ ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಗಾಯಗೊಂಡಿರುವ ನಾಗಪ್ಪ ಚಂದಪ್ಪ ದೊಡಮನಿ, ಭೀಮಣ್ಣ ಹಣಮಂತ ವಜ್ಜಲ, ಸಿದ್ದನಗೌಡ ಬಾಪುಗೌಡ ಬಂಟನೂರ ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಸವನಬಾಗೇವಾಡಿ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !