ಉಗ್ರರ ವಿರುದ್ಧ ಕ್ರಮ: ಅಮೆರಿಕಕ್ಕೆ ಭರವಸೆ ನೀಡಿದ ಪಾಕಿಸ್ತಾನ

ಬುಧವಾರ, ಮಾರ್ಚ್ 27, 2019
26 °C

ಉಗ್ರರ ವಿರುದ್ಧ ಕ್ರಮ: ಅಮೆರಿಕಕ್ಕೆ ಭರವಸೆ ನೀಡಿದ ಪಾಕಿಸ್ತಾನ

Published:
Updated:

ವಾಷಿಂಗ್ಟನ್‌: ತನ್ನ ನೆಲದಲ್ಲಿರುವ ಎಲ್ಲ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಅಮೆರಿಕಕ್ಕೆ ಭರವಸೆ ನೀಡಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೊಲ್ಟನ್‌ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್‌ ಖುರೇಷಿ ಈ ಆಶ್ವಾಸನೆ ನೀಡಿದ್ದಾರೆ.

‘ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಜೈಷ್‌–ಎ–ಮೊಹಮ್ಮದ್‌ ಮತ್ತು ಇತರ ಉಗ್ರಗಾಮಿ ಸಂಘಟನೆಗಳ ವಿರುದ್ಧ ಅರ್ಥಪೂರ್ಣವಾದ ಕಠಿಣ ಕ್ರಮಕೈಗೊಳ್ಳುವಂತೆ ಖುರೇಷಿ ಅವರಿಗೆ ತಿಳಿಸಲಾಯಿತು. ಇದಕ್ಕೆ ಖುರೇಷಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಭಾರತದ ಜತೆಗಿನ ಉದ್ವಿಗ್ವ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸುವುದಾಗಿ ಸಹ ಅವರು ತಿಳಿಸಿದ್ದಾರೆ’ ಎಂದು ಬೊಲ್ಟನ್‌ ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಇಸ್ಲಾಮಾಬಾದ್‌ನಲ್ಲಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಕಚೇರಿ, ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಬೊಲ್ಟಾನ್‌ ಅವರಿಗೆ ಮಾಹಿತಿ ನೀಡಲು ಖುರೇಷಿ ದೂರವಾಣಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !