ಆ್ಯಕ್ಷನ್‌ ಥ್ರಿಲ್ಲರ್‌ ... ಸಮಂತಾ ಕನಸು

ಮಂಗಳವಾರ, ಏಪ್ರಿಲ್ 23, 2019
29 °C

ಆ್ಯಕ್ಷನ್‌ ಥ್ರಿಲ್ಲರ್‌ ... ಸಮಂತಾ ಕನಸು

Published:
Updated:

‘ಸೂಪರ್ ಡಿಲಕ್ಸ್‌’ ಚಿತ್ರದ ನಟನೆಗೆ ಸಮಂತಾ ಅಕ್ಕಿನೇನಿಗೆ ಅಭಿಮಾನಿಗಳು ಬಹುಪರಾಕ್‌ ಹೇಳುತ್ತಲೇ ಇದ್ದಾರೆ. ಮನೋಜ್ಞ ನಟನೆಯಿಂದಲೇ ಗಮನ ಸೆಳೆಯುವ ಸಮಂತಾ ತೆಲುಗು ಚಿತ್ರರಂಗದ ಸೂಪರ್‌ ಸ್ಟಾರ್‌ಗಳೊಂದಿಗೆ ತೆರೆಹಂಚಿಕೊಂಡಿದ್ದಾಗಿದೆ. ಬಾಕಿ ಉಳಿದಿದ್ದವರು ಪ್ರಭಾಸ್‌. ಇದೀಗ ‘ಬಾಹುಬಲಿ’ಯೊಂದಿಗೆ ನಟಿಸುವ ಅವಕಾಶವನ್ನೂ ಅವರು ಗಿಟ್ಟಿಸಿಕೊಂಡಿದ್ದಾರೆ.

ತೆಲುಗಿನ ಮೆಗಾ ಚಿತ್ರಗಳ ನಿರ್ಮಾಪಕ ದಿಲ್‌ ರಾಜು ಅವರ ಕೈಲಿರುವ ಪ್ರಾಜೆಕ್ಟ್‌ಗೆ ಪ್ರಭಾಸ್ ನಾಯಕನಟ ಎಂಬುದು ಆಗಲೇ ಫಿಕ್ಸಾಗಿದೆ. ಸಮಂತಾ ತಮ್ಮ ಚಿತ್ರಕ್ಕೆ ನಾಯಕನಟಿಯಾಗಬೇಕು ಎಂಬುದು ಅವರ ಪ್ಲಾನ್. ಪವನ್‌ ಕಲ್ಯಾಣ್‌, ಮಹೇಶ್‌ ಬಾಬು, ರಾಮ್‌ ಚರಣ್‌, ಜೂನಿಯರ್‌ ಎನ್‌ಟಿಆರ್‌ ಅವರೊಂದಿಗೆ ಹಿಟ್‌ ಚಿತ್ರಗಳನ್ನು ನೀಡಿರುವ ಸಮಂತಾ ಅವರನ್ನು ಪ್ರಭಾಸ್‌ಗೆ ಜೋಡಿ ಮಾಡಲೇಬೇಕು ಎಂದು ದಿಲ್‌ ರಾಜು ಚಿಂತನೆ ಮಾಡಿದ್ದಾರೆ. ಮೆಗಾ ಬಜೆಟ್‌ನ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅಷ್ಟೇ ಅಲ್ಲ, ತಮ್ಮ ಕೈಲಿರುವ ಚಿತ್ರಕತೆಯನ್ನು ಸೂಪರ್‌ ಹಿಟ್‌ ಚಿತ್ರವಾಗಿಸುವ ಸಾಮರ್ಥ್ಯವುಳ್ಳ ನಿರ್ದೇಶಕರಿಗಾಗಿಯೂ ಅವರು ತಲಾಶ್‌ ಮಾಡುತ್ತಿದ್ದಾರೆ.

‘ಹೋಮ್ಲಿ ಗರ್ಲ್‌’, ಬಿಂದಾಸ್‌, ಚಾರ್ಮಿಂಗ್‌ ಪಾತ್ರಗಳನ್ನು ಮಾಡಿರುವ ಸಮಂತಾಗೆ ಈಗ ನಟನೆಯ ಇತರ ಆಯಾಮಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದಾರೆ. ವೈವಿಧ್ಯಮಯ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿರುವ ಮಿಸೆಸ್ ನಾಗಚೈತನ್ಯಗೆ ಮುಂದಿನ ಚಿತ್ರದಲ್ಲಿ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಇರಾದೆ ಇದೆಯಂತೆ.

ಈಗಾಗಲೇ ಮೂರು ಚಿತ್ರಗಳಿಗೆ ಸಹಿ ಹಾಕಿರುವ ಸಮಂತಾ, ದಿಲ್‌ರಾಜು ನಿರ್ಮಾಣದ ಚಿತ್ರದಲ್ಲಿ ಪ್ರಭಾಸ್‌ ಜೊತೆ ತೆರೆಮೇಲೆ ಬರುತ್ತಾರೆ ಎಂಬುದು ಅವರ ಅಭಿಮಾನಿಗಳಿಗೆ ಥ್ರಿಲ್‌ ಉಂಟು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !